ಹೊಸ ವರ್ಷದಲ್ಲಿ ಸಿನಿ ಇಂಡಸ್ಟ್ರಿಯ ಫೇಮಸ್ ಜೋಡಿಯೊಂದು ಮದುವೆಯೋಕೆ ಸಿದ್ಧತೆ ಶುರು ಮಾಡಿದೆ. ಹೌದು ಶೇರ್ ಶಾ ಜೋಡಿ ಕಿಯಾರಾ ಹಾಗೂ ಸಿದ್ಧಾರ್ಥ್ ಮದುವೆಯಾಗಲಿದ್ದಾರೆ.
2/ 7
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ. ಉದ್ಯಮದ ಕೆಲವು ಮೂಲಗಳು ಸಿದ್-ಕಿಯಾರಾ ಮ್ಯಾರೇಜ್ ಹಿಂಟ್ಸ್ ಕೊಟ್ಟಿವೆ.
3/ 7
ಫೆಬ್ರವರಿ ಮೊದಲ ವಾರದಲ್ಲಿ ಈ ಜೋಡಿಯ ಮದುವೆ ದಿನ ಗೊತ್ತುಮಾಡಲಾಗಿದೆ ಎಂದು ETimes ತಿಳಿಸಿದೆ. ಈ ಮೂಲಕ ಬಾಲಿವುಡ್ನ ಇನ್ನೊಂದು ಯಂಗ್ ಕಪಲ್ ಸತಿ-ಪತಿಯಾಗಲಿದ್ದಾರೆ.
4/ 7
ಸಿದ್ಧಾರ್ಥ್ ಮತ್ತು ಕಿಯಾರಾ ಫೆಬ್ರವರಿ 6 ರಂದು ಮದುವೆಯಾಗಲಿದ್ದಾರೆ. ಅವರ ವಿವಾಹದ ಪೂರ್ವ ಕಾರ್ಯಕ್ರಮಗಳು ಫೆಬ್ರವರಿ 4 ಮತ್ತು 5 ರಂದು ನಡೆಯಲಿವೆ ಎನ್ನಲಾಗಿದೆ.
5/ 7
ಅಲ್ಲಿ ಅವರ ಅತಿಥಿಗಳು ಮತ್ತು ಕುಟುಂಬಗಳು ಸಾಂಪ್ರದಾಯಿಕ, ಮೆಹೆಂದಿ, ಹಲ್ದಿ ಮತ್ತು ಸಂಗೀತ ಸಮಾರಂಭಗಳನ್ನು ಸಂಭ್ರಮಿಸಲಿದ್ದಾರೆ. ಮದುವೆ ಫೆಬ್ರವರಿ 6 ರಂದು ನಡೆಯಲಿದೆ.
6/ 7
ಮದುವೆ ಜೈಸಲ್ಮೇರ್ ಪ್ಯಾಲೇಸ್ ಹೋಟೆಲ್ನಲ್ಲಿ ನಡೆಯಲಿದೆ. ಇದು ಹೆಚ್ಚಿನ ಭದ್ರತೆಯೊಂದಿಗೆ ಅದ್ದೂರಿ ಕಾರ್ಯಕ್ರಮವಾಗಲಿದೆ ಎಂದು ಮೂಲವು ತಿಳಿಸಿದೆ.
7/ 7
ಜೈಸಲ್ಮೇರ್ ಪ್ಯಾಲೇಸ್ ಹೋಟೆಲ್ ರಾಜಸ್ಥಾನದ ಹೃದಯಭಾಗದಲ್ಲಿರುವ ವಿಸ್ತಾರವಾದ ಫೋರ್ಟ್-ಸ್ಟೈಲ್ ಲಕ್ಷುರಿ ಪ್ರಾಪರ್ಟಿಯಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ವಿವಾಹವು ಅದ್ಧೂರಿಯಾಗಿ ನಡೆಯಲಿದೆ.