ಚಿತ್ರರಂಗದಲ್ಲಿ ಹಲವು ಜೋಡಿಗಳ ಮಧ್ಯೆ ಲವ್ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅದಕ್ಕೆ ಕೆಲವರು ಪ್ರತಿಕ್ರಿಯಿಸುತ್ತಾರೆ. ಇನ್ನು ಕೆಲವರು ನಮ್ಮ ನಡುವೆ ಅಂಥದ್ದೇನೂ ಇಲ್ಲ. ನಾವಿಬ್ಬರು ಸ್ನೇಹಿತರಷ್ಟೇ ಎನ್ನುತ್ತಾರೆ. ಟಾಲಿವುಡ್ ನಟಿ ಅದಿತಿ ರಾವ್ ಹೈದರಿ ಬಗ್ಗೆಯೂ ಇದೇ ರೀತಿಯ ವದಂತಿಗಳು ಕೇಳಿಬರುತ್ತಿವೆ. ಇತ್ತೀಚೆಗಷ್ಟೇ ಹೀರೋ ಸಿದ್ಧಾರ್ಥ್ ಜೊತೆ ನಟಿ ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.