ಕಡಲ ತೀರದಲ್ಲಿ ತುಂಡುಡುಗೆಯಲ್ಲಿ Shwetha Srivatsav: ಟೀಕಿಸಿದವರ ಕಿವಿ ಹಿಂಡಿದ ಅಭಿಮಾನಿಗಳು..!
ಇತ್ತೀಚೆಗಷ್ಟೆ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ (Shwetha Srivatsav) ಅವರು ತಮ್ಮ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಗಳು ಹಾಗೂ ಗಂಡನ ಜೊತೆ ಕಡಲ ತೀರದಲ್ಲಿ ಬರ್ತ್ ಡೇ (Birthday) ಸೆಲಬ್ರೇಟ್ ಮಾಡಿದ್ದು, ಅಲ್ಲೇ ಸಖತ್ ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ. ಇನ್ನು ಕಡಲ ತೀರದಲ್ಲಿ ಶ್ವೇತಾ ಶ್ರೀವಾತ್ಸವ ತಂಡುಡುಗೆ ತೊಟ್ಟು ನೀರಿನಲ್ಲಿ ಆಡುತ್ತಾ ಪೋಸ್ ಕೊಟ್ಟಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್ಸ್ಟಾಗ್ರಾಂ ಖಾತೆ)
ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ಲಾಗಿ ಗಂಡ ಹಾಗೂ ಮಗಳ ಜೊತೆ ಆಚರಿಸಿಕೊಂಡಿದ್ದಾರೆ. ಜೊತೆಗೆ ಕುಟುಂಬದೊಂದಿಗೆ ಕಡಲ ತೀರಕ್ಕೆ ಹೋಗಿರುವ ನಟಿ ಅಲ್ಲಿ ನೀರಲ್ಲಿ ಆಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.
2/ 9
ಶ್ವೇತಾ ಶ್ರೀವಾತ್ಸವ ಅವರು ಕಡಲ ತೀರದಲ್ಲಿ ತುಂಡುಡುಗೆ ತೊಟ್ಟು ನೀರಿನಲ್ಲಿ ಆಡುತ್ತಾ ಎಂಜಾಯ್ ಮಾಡಿದ್ದಾರೆ. ಈ ವೇಳೆ ಅವರ ಕೆಲವು ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.
3/ 9
ಶ್ವೇತಾ ಶ್ರೀವಾತ್ಸವ ಅವರು ಕಡಲ ತೀರದಲ್ಲಿ ತೆಗೆದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
4/ 9
ಶ್ವೇತಾ ಶ್ರೀವಾತ್ಸವ ಅವರ ಈ ಪೋಸ್ಟ್ಗೆ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಟೀಕಿಸಿದ್ದಾರೆ. ಹೀಗೆ ತುಂಡುಡುಗೆ ತೊಟ್ಟು ಪೋಸ್ ಕೊಟ್ಟಿರುವುದು ಸರಿಯಲ್ಲ. ದಯವಿಟ್ಟು ನಮ್ಮ ಸಂಸ್ಕೃತಿ ಉಳಿಸಿ ಎಂದಿದ್ದಾರೆ.
5/ 9
ಕೆಲವರು ಟೀಕಿಸಿದವರನ್ನು ಸಮರ್ಥಿಸಿಕೊಂಡರೆ, ಶ್ವೇತಾ ಶ್ರೀವಾತ್ಸವ ಅವರ ಅಭಿಮಾನಿಗಳು ನಟಿಯ ಪರ ಬೆಂಬಲ ಸೂಚಿಸಿದ್ದಾರೆ. ನಿಮಗೆ ಇಷ್ಟವಿದ್ದರೆ ಹಿಂಬಾಲಿಸಿ, ಇಲ್ಲವಾದಲ್ಲಿ ಅನ್ಫಾಲೋ ಮಾಡಿ, ಹೀಗೆಲ್ಲ ಕಮೆಂಟ್ ಮಾಡಬೇಡಿ ಎಂದು ಕಿವಿ ಹಿಂಡಿದ್ದಾರೆ.
6/ 9
ಮಗಳ ಲಾಲನೆ-ಪಾಲನೆ ಜೊತೆ ಅಭಿನಯವನ್ನೂ ಮುಂದುವರೆಸುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ ಅವರ ಹೊಸ ಸಿನಿಮಾದ ಪೋಸ್ಟರ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿದೆ.
7/ 9
ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಅವರು ನಿರ್ಮಾಣ ಮಾಡಿರುವ ಈ ಹೋಪ್ ಸಿನಿಮಾದಲ್ಲಿ ಶ್ವೇತಾ ಶ್ರೀವಾತ್ಸವ ಅವರು ಕೆಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮೋಷನ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿದೆ.
8/ 9
ಈಗಾಗಲೇ ಹೋಪ್ ಸಿನಿಮಾದ ಚಿತ್ರೀಕರಣ ಮುಗಿದು ಹೋಗಿದೆ. ಲಾಕ್ಡೌನ್ನಲ್ಲೇ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಆದರೆ ಕೇವಲ 34 ದಿನಗಳಲ್ಲೇ ಶೂಟಿಂಗ್ ಮುಕ್ತಾಯವಾಗಿದೆಯಂತೆ.
9/ 9
ಅಬರೀಷ್ ಅವರ ನಿರ್ದೇಶನದ ಹೋಪ್ ಸಿನಿಮಾದಲ್ಲಿ ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಅವರು ನಟಿಸಿದ್ದಾರೆ. ಈ ಸಿನಿಮಾಗೆ ನಿರ್ಮಾಪಕಿ ವರ್ಷಾ ಸಂದೀಪ್ ಅವರೇ ಕಥೆ ಬರೆದಿದ್ದಾರಂತೆ.