Shwetha R Prasad: ಸಾಮಾಜಿಕ ಕೆಲಸದಲ್ಲೂ ಸೈ ಎನಿಸಿಕೊಂಡ 'ರಾಧಾ ಟೀಚರ್'! NGO ಮೂಲಕ ಸಮಾಜ ಸೇವೆಗಿಳಿದ ನಟಿ ಶ್ವೇತಾ
ಸೀರಿಯಲ್ ನಟಿ ಶ್ವೇತಾ ಆರ್ ಪ್ರಸಾದ್ ಇದೀಗ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗ್ತಿದ್ದಾರೆ. ಸಾಮಾಜಿಕ ಕೆಲಸ ಮಾಡಿ ಕೂಡ ಶ್ವೇತಾ ಪ್ರಸಾದ್ ಗುರುತಿಸಿಕೊಂಡಿದ್ದಾರೆ. ಇದೀಗ ಎನ್ ಜಿ ಒ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ.
ಸಂಕ್ರಾಂತಿ ಸಂಭ್ರಮದ ದಿನ ಮನೆಯಲ್ಲಿ ಶ್ವೇತಾ ಆರ್ ಪ್ರಸಾದ್ ವಿಶೇಷ ಪೂಜೆ, ಹೋಮವನ್ನು ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದರು.
2/ 8
ಪ್ರಸಾದ್ ಫೌಂಡೇಶನ್ ಎನ್ಜಿಒ ಮೂಲಕ ನಟಿ ಸಹಾಯ ಮಾಡಲು ಮುಂದಾಗಿದ್ದಾರೆ. ಬಹುದಿನಗಳಿಂದ ನಟಿ NGO ಕನಸು ಕಂಡಿದ್ದರು. ಶ್ವೇತಾ ತಂದೆ ಪ್ರಸಾದ್, ಹಸಿದವರಿಗೆ ಅನ್ನ ಹಾಕು, ಕೈಲಾದಷ್ಟು ಅನ್ನದಾನ ಮಾಡು ಎಂದು ತಂದೆ ಹೇಳಿದ್ದರಂತೆ
3/ 8
ತಂದೆ ಮಾತನ್ನು ನಟಿ ಶ್ವೇತಾ ಈಡೇರಿಸಲು ಮುಂದಾಗಿದ್ದಾರೆ. NGO ಮೂಲಕ ಬಡವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.
4/ 8
ಶ್ವೇತಾ ಕೆಲಸಕ್ಕೆ ಅನೇಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಶೀಘ್ರದಲ್ಲೇ ಶ್ವೇತಾ ಸಿನಿಮಾಗಳು ರಿಲೀಸ್ ಆಗಲಿದೆ. ಸದ್ಯ ಸಿನಿಮಾ ನಿರ್ಮಾಣ, ಉದ್ಯಮದಲ್ಲಿಯೂ ಶ್ವೇತಾ ಬ್ಯುಸಿಯಾಗಿದ್ದಾರೆ.
5/ 8
ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ವೇತಾ ಆರ್ ಪ್ರಸಾದ್ 'ರಾಧಾ ರಮಣ' ಸೀರಿಯಲ್ ಮೂಲಕ ಫೇಮಸ್ ಆಗಿದ್ದಾರೆ.
6/ 8
ಸೀರಿಯಲ್ ಮೂಲಕ ಜನಪ್ರಿಯರಾದ ನಟಿ ಶ್ವೇತಾ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
7/ 8
[caption id="attachment_941206" align="alignnone" width="640"] ಸಮಯ ಸಿಕ್ಕಾಗೆಲ್ಲಾ ಜಾಲಿ ಟ್ರಿಪ್ ಮಾಡುವ ಶ್ವೇತಾ, ಪ್ರವಾಸದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ.
[/caption]
8/ 8
ನಟನೆ, ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ಶ್ವೇತಾ ಸಾಮಾಜಿಕ ಕೆಲಸ ಮಾಡಿಯೂ ಗುರುತಿಸಿಕೊಂಡಿದ್ದರು.