Shwetha Chengappa: ಲೆಮನ್ ಕಲರ್ ಸೀರೆಯಲ್ಲಿ ಶ್ವೇತಾ ಚೆಂಗಪ್ಪ! ಪ್ರೀತಿಯ ಸಂದೇಶ
ನಟಿ ಶ್ವೇತಾ ಚೆಂಗಪ್ಪ ಚಂದದ ಲೆಮನ್ ಕಲರ್ ಸೀರೆ ಉಟ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿಯ ಕ್ಯೂಟ್ ಲುಕ್ ಹೀಗಿತ್ತು.
1/ 7
ಸ್ಯಾಂಡಲ್ವುಡ್ ನಟಿ ಶ್ವೇತಾ ಚೆಂಗಪ್ಪ ಅವರು ಇತ್ತೀಚೆಗೆ ಲೆಮನ್ ಕಲರ್ ಸೀರೆ ಉಟ್ಟು ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಕತ್ತಲ ಕೋಣೆಯಲ್ಲಿ ನಟಿಯ ಲುಕ್ ಸುಂದರವಾಗಿ ಮೂಡಿಬಂದಿದೆ.
2/ 7
ಧಾರಾವಾಹಿಗಳ ಮೂಲಕ ಪ್ರೇಕ್ಷರನ್ನು ರಂಜಿಸಿದ ನಟಿ ಕೆಲವೊಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮಜಾ ಟಾಕೀಸ್ನಲ್ಲಿ ರಾಣಿ ಪಾತ್ರದಿಂದಲೇ ಪರಿಚಿತರು.
3/ 7
ಉದಯ ಟಿವಿಯಲ್ಲಿ ಪ್ರಸಾರವಾದ ನಾರಾಯಣ್ ಅವರ ಸುಮತಿ ಧಾರವಾಹಿಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿದ್ದರು ಶ್ವೇತಾ.
4/ 7
ತಂಗಿಗಾಗಿ, ವರ್ಷ ಸಿನಿಮಾಗಳಲ್ಲಿ ಶ್ವೇತಾ ನಟಿಸಿದ್ದಾರೆ. ವರ್ಷ ಸಿನಿಮಾದಲ್ಲಿ ನಟ ವಿಷ್ಣುವರ್ಧನ್ ಜೊತೆ ತೆರೆ ಹಂಚಿಕೊಂಡಿದ್ದರು.
5/ 7
ಝೀ ಕನ್ನಡದ ಕುಣಿಯೋಣ ಬಾರ ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದರು ಶ್ವೇತಾ. ಈ ಮೂಲಕ ಕಾರ್ಯಕ್ರಮ ನಿರೂಪಕಿಯಾಗಿಯೂ ಗುರುತಿಸಿಕೊಂಡರು.
6/ 7
ನಟಿ ಬಿಗ್ಬಾಸ್ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ನಟಿ ಸುಮಾರು 5 ಧಾರವಾಹಿಗಳನ್ನು ಮಾಡಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸು ಗೆದ್ದಿದ್ದರು.
7/ 7
ಇದೀಗ ನಟಿ ಹೊಸ ಫೋಟೋಶೂಟ್ ಶೇರ್ ಮಾಡಿಕೊಂಡಿದ್ದು ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ. ಫೋಟೋಗೆ ರಿಯಾಕ್ಟ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
First published: