ಕಳೆದ ವರ್ಷ ಮಾಲ್ಡೀವ್ಸ್ ನಲ್ಲಿ ಶುಭ್ರ ಅಯ್ಯಪ್ಪಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದ ವಿಶಾಲ್ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
2/ 8
ಶುಭ್ರಾ ಹಾಗೂ ವಿಶಾಲ್ ಜೋಡಿ ಕೊಡಗಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದೆ. ನಟಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಕೋರಿದ್ದಾರೆ.
3/ 8
ವಜ್ರಕಾಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಶುಭ್ರಾ ಅಯ್ಯಪ್ಪ ಅವರು ಜನವರಿ 18ರಂದು ವಿಶಾಲ್ ಶಿವಪ್ಪ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
4/ 8
ಶುಭ್ರಾ ಅವರು ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನವಜೋಡಿಗೆ ಶುಭಕೋರಿದ್ದಾರೆ.
5/ 8
ಮಾಡೆಲ್ ಹಾಗೂ ನಟಿಯಾಗಿ ಶುಭ್ರಾ ಫೇಮಸ್ ಆಗಿದ್ದಾರೆ. 2014ರಲ್ಲೇ ಚಿತ್ರರಂಗಕ್ಕೆ ನಟಿ ಶುಭ್ರಾ ಎಂಟ್ರಿ ಕೊಟ್ಟಿದ್ರು. ಕಳೆದ ವರ್ಷ ತೆರೆಗೆ ಬಂದ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ ಚಿತ್ರದಲ್ಲಿ ನಟಿಸಿದ್ದರು.
6/ 8
ಸದ್ಯ ಶುಭ್ರಾ ಅವರು ‘ರಾಮನ ಅವತಾರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ವಿವಾಹವಾಗಿದ್ದಾರೆ.
7/ 8
6 ವರ್ಷಗಳಿಂದ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಪ್ರೀತಿ ಮಾಡ್ತಾ ಇದ್ದಾರೆ. ಡೇಟಿಂಗ್ ಮಾಡ್ತಾ ಇದ್ದ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
8/ 8
ವಿಶಾಲ್ ಶಿವಪ್ಪ ಉದ್ಯಮಿ ಆಗಿದ್ದು ನಟಿ ಶುಭ್ರಾ ಅಯ್ಯಪ್ಪಗೆ ಮೊದಲು ಪ್ರಪೋಸ್ ಮಾಡಿದ್ರಂತೆ. ಪ್ರಪೋಸ್ ಮಾಡಿ ಕೆಲ ದಿನಗಳ ನಂತರ ನಟಿ ಶುಭ್ರಾ , ವಿಶಾಲ್ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.