Shruti Haasan: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ ಶ್ರುತಿ ಹಾಸನ್!? ನಟಿ ಹೇಳಿದ್ದೇನು?
ಕಮಲ್ ಹಾಸನ್ ಪುತ್ರಿ ಹಾಗೂ ನಟಿ ಶ್ರುತಿ ಹಾಸನ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅನೇಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ನಟಿ ಶ್ರುತಿ ಹಾಸನ್ ಗಾಳಿ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರ ಬಹು ನಿರೀಕ್ಷಿತ ಚಿತ್ರ ವೋಲ್ಟೇರ್ ವೀರಯ್ಯ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಪ್ರೀ ಲಾಂಚ್ ಕಾರ್ಯಕ್ರಮ ನಡೆದಿತ್ತು, ಈ ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದರು.
2/ 8
ಕಾರ್ಯಕ್ರಮಕ್ಕೆ ಶ್ರುತಿ ಬರದಿರಲು ಮಾನಸಿಕ ಸಮಸ್ಯೆ ಕಾರಣ ಎನ್ನಲಾಗಿತ್ತು. ಆ ಕಾರಣದಿಂದಲೇ ಆಕೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
3/ 8
ಇಂತಹ ಸುದ್ದಿ ಕೇಳಿದ ನಟಿ ಶ್ರುತಿ ಹಾಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಚೆನ್ನಾಗಿದ್ದೇನೆ. ಅದೆಲ್ಲಾ ಸುಳ್ಳು ಸುದ್ದಿ ಎಂದು ನಟಿ ಕಿಡಿಕಾರಿದ್ದಾರೆ. ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿಜವಾದ ಕಾರಣ ಕೂಡ ಹೇಳಿದ್ದಾರೆ.
4/ 8
ವೈರಲ್ ಫೀವರ್ ನಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಸಾಲು ಸಾಲು ಪೋಸ್ಟ್ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
5/ 8
ನನ್ನ ಮಾನಸಿಕ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿದೆ, ನಾನು ಯಾವಾಗಲೂ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇನೆ. ಹಾಗೇ ನನ್ನ ಮಾನಸಿಕ ಸ್ಥಿತಿ ಕೂಡ ಚೆನ್ನಾಗಿಯೇ ಇದೆ ಎಂದು ನಟಿ ಶ್ರುತಿ ಹಾಸನ್ ಹೇಳಿದ್ದಾರೆ.
6/ 8
ಸಾಲು ಸಾಲು ಸಿನಿಮಗಳಲ್ಲಿ ಬ್ಯುಸಿ ಆಗಿರುವ ಶ್ರುತಿ ಹಾಸನ್, ತನ್ನ ಆರೋಗ್ಯದ ಬಗ್ಗೆ ಹರಡಿದ್ದ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
7/ 8
ಶ್ರುತಿ ಹಾಸನ್ ಅಭಿನಯದ ವಾಲ್ಟರ್ ವೀರಯ್ಯ ಚಿತ್ರವು ಜನವರಿ 13ರಂದು ಬಿಡುಗಡೆಯಾಗಲಿದೆ. ಅದೇ ದಿನ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
8/ 8
ಅದೇ ದಿನ ಶ್ರುತಿ ಅಭಿನಯದ ವೀರಸಿಂಹ ರೆಡ್ಡಿ ಚಿತ್ರವೂ ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಜನ ಮೆಚ್ಚಿಗೆಗಳಿಸಿದೆ.