ಈ ಪಾತ್ರಕ್ಕಾಗಿ ಚುಟ್ಟ ಸೇವುದನ್ನು ಕಲಿಯುವುದರ ಜೊತೆಗೆ ನಿತ್ಯ ಜಿಮ್ಗೆ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ಬೆವರಿಳಿಸುತ್ತಿದ್ದರಂತೆ. ಒಮ್ಮೆ ಜಿಮ್ನಲ್ಲಿ ಶ್ರುತಿ ಅವರನ್ನು ನೋಡಿದ ಯಶ್, ತೂಕ ಇಳಿಸಲು ಇಷ್ಟೆಲ್ಲ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದರಂತೆ. ಆದರೆ, ಅದಕ್ಕೆ ಉತ್ತರಿಸಿದ್ದ ಶ್ರುತಿ, ವಿಲನ್ ಆಗೋಕೆ ಇದೆಲ್ಲ ಮಾಡುತ್ತಿರುವುದಾಗಿ ಹೇಳಿದ್ದರಂತೆ. ಆಗಲೇ ಯಶ್ ಅವರಿಗೆ ಬಾಟಲ್ ಮಣಿ ಪಾತ್ರದ ಬಗ್ಗೆ ತಿಳಿದಿದ್ದಂತೆ. ಈ ಕುರಿತಾಗಿ ಯಶ್ ಭಜರಂಗಿ 2 ಚಿತ್ರ ಪ್ರೀ-ರಿಲೀಸ್ ಇವೆಂಟ್ನಲ್ಲಿ ಹೇಳಿದ್ದರು.