Shruthi Krishna: ಅಪ್ಪ-ಅಮ್ಮಂದಿರ ಅಪರೂಪದ ಫೋಟೋ ಹಂಚಿಕೊಂಡ ನಟಿ ಶ್ರುತಿ..!
ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪೋಸ್ಟ್ ಮಾಡುವ ನಟಿ ಶ್ರುತಿ ತಮ್ಮ ತಂದೆ ಹಾಗೂ ತಾಯಂದಿರ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಕೃಷ್ಣ ಇನ್ಸ್ಟಾಗ್ರಾಂ ಖಾತೆ)
ನಟಿ ಶ್ರುತಿ ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕಲಾರಾಧನೆ ಅವರ ರಕ್ತದಲ್ಲೇ ಇದೆ.
2/ 9
ಶ್ರುತಿ ಅವರ ತಂದೆ ಹಾಗೂ ತಾಯಂದಿರುವ ರಂಗಭೂಮಿ ಹಿನ್ನಲೆವುಳ್ಳವರು.
3/ 9
ನಾಟಕಗಳನ್ನು ಮಾಡುತ್ತಾ ಊರೂರು ಸುತ್ತುತ್ತಿದ್ದರು ಶ್ರುತಿ ಅವರ ಪೋಷಕರು.
4/ 9
ಶ್ರುತಿ ತಂದೆ ಅವರಿಗೆ ಇಬ್ಬರು ಮಡದಿಯರು. ತಂದೆ ಕೃಷ್ಣ ಅವರು ಅವಳಿ ಸಹೋದರಿಯರಾದ ರಾಧಾ ರುಕ್ಮಣಿ ಅವರನ್ನು ವಿವಾಹವಾಗಿದ್ದಾರೆ.
5/ 9
ಶ್ರುತಿ ಅವರ ಅಮ್ಮಂದಿರು ಗುಬ್ಬಿ ಕಂಪನಿಯಲ್ಲಿ ಗಾಜಿನ ಮನೆ ಎಂಬ ನಾಟಕ ಮಾಡುವಾಗ ತೆಗೆದ ಚಿತ್ರವಿದು. ಆಗ ಅಮ್ಮನಿಗೆ" 13 " ವರ್ಷವಂತೆ ಈ ಚಿತ್ರವನ್ನು ಶ್ರುತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6/ 9
ಇತ್ತೀಚೆಗಷ್ಟೆ ಶ್ರುತಿ ಅವರ ಅಪ್ಪ-ಅಮ್ಮಂದಿರು 50ನೇ ವರ್ಷದ ವಿವಾಹವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
7/ 9
ವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಶ್ರುತಿ ಅವರ ತಂದೆ ಜಿ ವಿ ಕೃಷ್ಣ ಹಾಗೂ ನಟಿ ಮಂಜುಳಾ ಅವರ ಜೋಡಿ.
8/ 9
ವೀರ ಸಿಂಧೂರ ಲಕ್ಷ್ಮಣ ಚಿತ್ರದ ಶೂಟಿಂಗ್ ವೇಳೆ ಶ್ರುತಿ ಅವರ ಇಬ್ಬರು ಅಮ್ಮಂದಿರು ತೆಗೆಸಿ ಕೊಂಡ ಫೋಟೋ ಇದು.