Shriya Saran: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಟಾಲಿವುಡ್ ನಟಿ ಶ್ರೀಯಾ..!
Shriya Saran: ಟಾಲಿವುಡ್ ನಟಿ ಶ್ರೀಯಾ ಸರಣ್ ಇತ್ತೀಚೆಗಷ್ಟೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಪ್ರೀತಿಸಿ ವಿವಾಹವಾಗಿರುವ ಈ ಜೋಡಿಯ ಮದುವೆ ಮೊದಲು ರಹಸ್ಯವಾಗಿ ಖಾಸಗಿಯಾಗಿ ಆಗಿತ್ತು. (ಚಿತ್ರಗಳು ಕೃಪೆ: ಶ್ರೀಯಾ ಸರಣ್ ಇನ್ಸ್ಟಾಗ್ರಾಂ ಖಾತೆ)
ಟಾಲಿವುಡ್ ನಟಿ ಶ್ರೀಯಾ ಸರಣ್ ಇತ್ತೀಚೆಗಷ್ಟೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
2/ 8
ಒಂದು ಕಾಲದಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಟಾಲಿವುಡ್ ಅನ್ನೇ ಆಳಿದ ಸ್ಟಾರ್ ನಟಿ ಬಹಳ ಕಾಲದಿಂದ ಪ್ರೀತಿಸಿದ್ದ ರಷ್ಯನ್ ಟೆನ್ನಿಸ್ ಆಟಗಾರನಾಗಿದ್ದ ಆ್ಯಂಡ್ರಿ ಅವರನ್ನು ವರಿಸಿದರು.
3/ 8
2018 ಮಾರ್ಚ್ 12ರಂದು ಮೊದಲು ರಿಜಿಷ್ಟರ್ ಮದುವೆಯಾಗಿ ನಂತರ 17-18ರಂದು ಹಿಂದೂ ಸಂಪ್ರದಾಯದಂತೆ ಉದಯ್ಪುರದಲ್ಲಿ ಸಪ್ತಪದಿ ತುಳಿದಿದ್ದರು.
4/ 8
ಮದುವೆಯಾದ ನಂತರ ಶ್ರೀಯಾ ಸಿನಿಮಾಗಳಿಂದ ಕೆಲ ಸಮಯ ದೂರ ಉಳಿದಿದ್ದರು.
5/ 8
ಸದ್ಯ ಶ್ರೀಯಾ ಪತಿಯೊಂದಿಗೆ ವಿದೇಶದಲ್ಲೇ ನೆಲೆಸಿದ್ದಾರೆ.
6/ 8
ವಿವಾಹವಾದ ನಂತರ ಶ್ರೀಯಾ ಸರಣ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
7/ 8
ಆದರೆ ಈಗ ತೆಲುಗಿನ ಸಿನಿಮಾದಲ್ಲಿ ವೆಂಕಟೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.