ಪತಿ Andrei Koscheev ಜತೆ ತಿರುಪತಿ-ಶ್ರೀಕಾಳಹಸ್ತಿಗೆ ಭೇಟಿ ಕೊಟ್ಟ ನಟಿ Shriya Saran..!
ದಕ್ಷಿಣ ಭಾರತದ ಖ್ಯಾತ ಕಲಾವಿದೆ ಶ್ರೀಯಾ ಶರಣ್ (Shriya Saran) ತಮ್ಮ ಪತಿ ಆ್ಯಂಡ್ರೆ ಕೋಶ್ಚೀವ್ (Andrei Koscheev) ಅವರೊಂದಿಗೆ ಭಾರತಕ್ಕೆ ಹಿಂತಿರುಗಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆಯೇ ತಿರುಪತಿ (Tirupati) ಹಾಗೂ ಶ್ರೀಕಾಳಹಸ್ತಿ (SriKalahasti) ದೇವಾಲಯಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. (ಚಿತ್ರಗಳು ಕೃಪೆ: ಶ್ರೀಯಾ ಶರಣ್ ಇನ್ಸ್ಟಾಗ್ರಾಂ ಖಾತೆ)
ತೆಲುಗಿನ ಇಷ್ಟಂ ಸಿನಿಮಾದ ಮೂಲಕ ನಾಯಕಿಯಾಗಿ ಸಿನಿಪ್ರಿಯರಿಗೆ ಪರಿಚಯವಾದವರು ನಟಿ ಶ್ರೀಯಾ ಶರಣ್ (Shriya Saran). ನಂತರ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಈ ನಟಿ ವಿವಾಹವಾದ ನಂತರ ತಮ್ಮ ಪತಿ ಆ್ಯಂಡ್ರೆ ಕೋಶ್ಚೀವ್ (Andrei Koscheev) ಅವರೊಂದಿಗೆ ವಿದೇಶದಲ್ಲಿ ನೆಲೆಸಿದರು.
2/ 8
ಸದ್ಯ ಭಾರತಕ್ಕೆ ಮರಳಿರುವ ಈ ನಟಿ ಈಗ ಪತಿ ಜೊತೆಗೆ ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಹೌದು, ಅವರು ತಿರುಪತಿ ಹಾಗೂ ಶ್ರೀಕಾಳಹಸ್ತಿ ದೇವಾಲಯಕ್ಕೆ ಹೋಗಿದ್ದು, ಅಲ್ಲಿ ಪೂಜೆ ಸಲ್ಲಿಸಿದ್ದಾರೆ.
3/ 8
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುವ ಈ ನಟಿ, ಈಗ ಪತಿಯ ಜೊತೆ ಶ್ರೀಕಾಳಹಸ್ತಿ ದೇವಾಲಯದಲ್ಲಿ ಪೂಜೆ ಮಾಡಿದ ಚಿತ್ರವನ್ನು ಶೇರ್ ಮಾಡಿದ್ದಾರೆ.
4/ 8
ಮದುವೆಯಾದ ನಂತರವೂ ಶ್ರೀಯಾ ಶರಣ್ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಜಯ್ ದೇವಗನ್(Ajay Devgan) ಅಭಿನಯದ ದೃಶ್ಯಂ (Drishyam) ಚಿತ್ರದಲ್ಲಿ ಶ್ರೀಯಾ ನಟಿಸಿದ್ದಾರೆ. ಈಗ ದೃಶ್ಯಂ2ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
5/ 8
ದಕ್ಷಿಣ ಭಾರತದ ನಟಿ ಶ್ರೀಯಾ ಶರಣ್ (Shriya Saran) ಟೆನ್ನಿಸ್ ಆಟಗಾರ ಹಾಗೂ ಉದ್ಯಮಿ ಆ್ಯಂಡ್ರೆ ಕೋಶ್ಚೀವ್ (Andrei Koscheev) ಅವರನ್ನು 2018ರಲ್ಲಿ ವಿವಾಹವಾದರು.
6/ 8
ಇಬ್ಬರೂ ವಿವಾಹವಾದ(Shriya Saran Andrei Koscheev Marriage) ನಂತರ ಬಾರ್ಸಿಲೋನಾಗೆ ಹೋಗಿ ಸೆಟಲ್ ಆದರು. ಸಾಮಾಜಿಕ ಜಾಕತಾಣದಲ್ಲಿ ಸಕ್ರಿಯವಾಗಿರುವ ನಟಿ ಶ್ರೀಯಾ ಶರಣ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಇನ್ನು ಪತಿಯ ಜತೆ ಮಾಡಿರುವ ಪ್ರವಾಸದ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ನಟಿ.
7/ 8
ಶ್ರೀಯಾ ಶರಣ್ ಅವರ ವೃತ್ತಿ ಜೀವನದ ವಿಷಯಕ್ಕೆ ಬಂದರೆ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅವರ ಆರ್ಆರ್ಆರ್ ಸಿನಿಮಾದಲ್ಲಿ ಶ್ರೀಯಾ ಶರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
8/ 8
ಈ ಹಿಂದೆ ದೃಶ್ಯಂ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ನಟಿಸಿದ್ದ ಶ್ರೀಯಾ ಈಗ ದೃಶ್ಯಂ 2 ಚಿತ್ರದ ರಿಮೇಕ್ನಲ್ಲೂ ಶ್ರೀಯಾ ಕಾಣಿಸಿಕೊಳ್ಳಲಿದ್ದಾರೆ.