Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

ಶ್ರೇಯಸ್ ತಲ್ಪಾಡೆ ಅನೇಕ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಇದೀಗ ಶ್ರೇಯಸ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ. ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಕೂಡ ಅಭಿನಯಿಸುತ್ತಿದ್ದಾರೆ.

First published:

  • 17

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ಹಿಂದಿ, ಮರಾಠಿ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ ಶ್ರೇಯಸ್ ಈಗ ದಕ್ಷಿಣದಲ್ಲಿ ಹೆಸರು ಮಾಡಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಅವರು ‘ಅಜಾಗ್ರತ’ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 27

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ಎಂ ಶಶಿಧರ್ ನಿರ್ದೇಶನದ ಈ ಚಿತ್ರವು ಖ್ಯಾತ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರ ಕನ್ನಡ ಚೊಚ್ಚಲ ಚಿತ್ರವಾಗಿದೆ. ರವಿರಾಜ್ ನಿರ್ಮಿಸಿರುವ ಅಜಾಗ್ರತ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಸಿನಿಮಾ ರಿಲೀಸ್ ಆಗಲಿದೆ.

    MORE
    GALLERIES

  • 37

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ರಾಧಿಕಾ ಮತ್ತು ಶ್ರೇಯಸ್ ಅವರ ಜೊತೆ ಈ ಚಿತ್ರದಲ್ಲಿ ಪ್ರಸಿದ್ಧ ತಮಿಳು ನಟ-ಚಿತ್ರ ನಿರ್ಮಾಪಕ ಸಮುದ್ರಕನಿ, ಜಯಪ್ರಕಾಶ್, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ಮತ್ತು ವಿನಯ್ ಪ್ರಸಾದ್ ನಟಿಸಿದ್ದಾರೆ.

    MORE
    GALLERIES

  • 47

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ಚಿತ್ರದ ಶೂಟಿಂಗ್ ಫೋಟೋಗಳನ್ನು ನಟ ಶ್ರೇಯಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೌತ್​ನಲ್ಲಿ ಇದು ನನ್ನ ಮೊದಲ ಚಿತ್ರವಾಗಿದೆ. ನೀವು ಸೌತ್ ಸಿನಿಮಾದ ಹಿಂದಿ ಡಬ್​ಗಾಗಿ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದೀರಿ. ಇದೀಗ ಉತ್ತಮ ಕಥೆಯುಳ್ಳ ಸೌತ್ ಸಿನಿಮಾ ಮಾಡಲು ಮುಂದಾಗಿದ್ದೇನೆ ಎಂದು ಶ್ರೇಯಸ್ ಬರೆದುಕೊಂಡಿದ್ದಾರೆ.

    MORE
    GALLERIES

  • 57

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ಶ್ರೀಹರಿ ಸಂಗೀತ ನಿರ್ದೇಶಕರಾಗಿದ್ದಾರೆ, ಗೌಳಿ ಖ್ಯಾತಿಯ ಸಂದೀಪ್ ವಲ್ಲೂರಿ ಛಾಯಾಗ್ರಾಹಕರಾಗಿದ್ದಾರೆ. ಅಜಾಗ್ರತ ಸಿನಿಮಾ ಪೂಜಾ ಕಾರ್ಯ ಮೇ 13 ರಂದು ಹೈದರಾಬಾದ್ನಲ್ಲಿ ನಡೆದಿದ್ದು, ಮೇ 15 ರಂದು ಶೂಟಿಂಗ್ ಶುರುವಾಗಲಿದೆ.

    MORE
    GALLERIES

  • 67

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ಚಿತ್ರದ ಚಿತ್ರೀಕರಣ ಹೈದರಾಬಾದ್, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆಯಲಿದೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ ‘ಘಾರ್ಗ’ ಚಿತ್ರವನ್ನು ನಿರ್ದೇಶಿಸಿರುವ ಶಶಿಧರ್ ಅವರಿಗೆ ಅಜಾಗ್ರತ ಎರಡನೇ ಸಿನಿಮಾ ಆಗಿದೆ.

    MORE
    GALLERIES

  • 77

    Shreyas Talpade: ಕನ್ನಡಕ್ಕೆ ಶ್ರೇಯಸ್ ತಲ್ಪಾಡೆ ಎಂಟ್ರಿ! ಸೈಕಲಾಜಿಕಲ್ ಥ್ರಿಲ್ಲರ್ ಮೂವಿಯಲ್ಲಿ ರಾಧಿಕಾ ಕುಮಾರಸ್ವಾಮಿ

    ಅಜಾಗ್ರತ ಒಂದು ಸೈಕಾಲಜಿಕಲ್ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವಾಗಿದೆ. ಏಳು ಭಾಷೆಗಳಲ್ಲಿಯೂ ನೇರ ಚಿತ್ರೀಕರಣವಾಗುತ್ತಿದೆ. 7 ಭಾಷೆಯಲ್ಲೂ ಏಕಕಾಲಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    MORE
    GALLERIES