ಶ್ರೇಯಾ ಘೋಷಾಲ್ ಬಾಲಿವುಡ್‌ನ ಪ್ರಸಿದ್ಧ ಹಿನ್ನೆಲೆ ಗಾಯಕಿ. ಅವರು ಬಾಲಿವುಡ್ ಮಾತ್ರವಲ್ಲದೆ ಪ್ರಾದೇಶಿಕ ಚಿತ್ರಗಳಲ್ಲಿಯೂ ಅನೇಕ ಹಾಡುಗಳನ್ನು ಹಾಡಿದ್ದಾರೆ. ಇದರೊಂದಿಗೆ ಶ್ರೇಯಾ ಅನೇಕ ಟಿವಿ ಧಾರಾವಾಹಿಗಳಿಗೂ ಧ್ವನಿ ನೀಡಿದ್ದಾರೆ. ಅವರು ಹಿಂದಿ ಮತ್ತು ಭೋಜ್‌ಪುರಿ, ಬೆಂಗಾಲಿ, ಕನ್ನಡ, ಮಲಯಾಳಂ, ಪಂಜಾಬಿ, ತಮಿಳು, ತೆಲುಗು ಮತ್ತು ಅಸ್ಸಾಮಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದರು.
ಶ್ರೇಯಾ ಮತ್ತು ಶಿಲಾದಿತ್ಯ ಮದುವೆಗೆ ಮೊದಲು ಸುಮಾರು 10 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಅದೇ ಸಮಯದಲ್ಲಿ, ಶಿಲಾದಿತ್ಯ ಅವರು ಮೊದಲು ಶ್ರೇಯಾಗೆ ಪ್ರಪೋಸ್ ಮಾಡಿದ್ರಂತೆ. ಅವರ ಪ್ರಪೋಸ್ ಮಾಡುವ ವಿಧಾನವು ತುಂಬಾ ವಿಶಿಷ್ಟವಾಗಿದೆ ಎಂದು ಹೇಳಲಾಗುತ್ತದೆ. ಶ್ರೇಯಾ ತನ್ನ ಸಂದರ್ಶನವೊಂದರಲ್ಲಿ ತಾನು ಮತ್ತು ಶಿಲಾದಿತ್ಯ ಸ್ನೇಹಿತನ ಮದುವೆಯಲ್ಲಿ ಭಾಗವಹಿಸಿದ್ದಾಗ ಪ್ರಪೋಸ್ ಮಾಡಿದ್ದರು ಎಂದು ಹೇಳಿದ್ದರು.