Tunisha Sharma Case: ತುನಿಶಾ ಶರ್ಮಾ ಬ್ರೇಕಪ್ಗೂ, ಶ್ರದ್ಧಾ ಕೊಲೆ ಕೇಸ್ಗೂ ಏನು ಸಂಬಂಧ? ಪ್ರಿಯಕರ ಶೀಜಾನ್ ಖಾನ್ ಬಾಯ್ಬಿಟ್ಟ ಸತ್ಯವೇನು?
ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ (Tunisha Sharma) ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮಾಜಿ ಪ್ರಿಯಕರ ಶೀಜಾನ್ ಖಾನ್ (Sheezan Khan) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ತುನಿಶಾ ತಾಯಿ ಶೀಜಾನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಶೀಜಾನ್ ಖಾನ್ ವಿಚಾರಣೆ ವೇಳೆ ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
ಸೀರಿಯಲ್ ಶೂಟಿಂಗ್ ಸೆಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟಿ ತುನಿಷಾ ಶರ್ಮಾ ಅವರ ಸಹನಟ ಶೀಝಾನ್ ಖಾನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅವರ ತಾಯಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ ನಂತರ ಅವರನ್ನು ಬಂಧಿಸಲಾಗಿದೆ.
2/ 7
ನಟಿಯ ತಾಯಿ ಆತ್ಮಹತ್ಯೆ ಪ್ರೇರಣೆ ಆರೋಪಿಸಿ ದೂರುಕೊಟ್ಟ ನಂತರ ಶೀಝಾನ್ನನ್ನು ಬಂಧಿಸಲಾಗಿದೆ. ಶ್ರೀಝಾನ್ ಮತ್ತು ತುನಿಷಾ ತಮ್ಮ ಟಿವಿ ಶೋ ಅಲಿಬಾಬಾ - ದಾಸ್ತಾನ್-ಎ-ಕಾಬೂಲ್ನಲ್ಲಿ ಲೀಡಿಂಗ್ ಪಾತ್ರದಲ್ಲಿ ನಟಿಸಿದ್ದಾರೆ.
3/ 7
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿಕೊಂಡು ವಾಲಿವ್ ಪೊಲೀಸರು ನಟಿ ತುನಿಷಾ ಶರ್ಮಾ ಅವರ ಸಹನಟ ಶೀಝಾನ್ ಖಾನ್ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
4/ 7
ಶೀಝನ್ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತುನೀಶಾ ಆತ್ಮಹತ್ಯೆಗೆ ಕಾರಣವೇನು ಎಂಬ ವಿವರ ಇನ್ನೂ ಸ್ಪಷ್ಟವಾಗಿಲ್ಲ.
5/ 7
ಧಾರಾವಾಹಿ ಅಲಿ ಬಾಬಾ ದಾಸ್ತಾನ್-ಇ-ಕಾಬೂಲ್ನಲ್ಲಿ ತುನಿಶಾ ಶೆಹಜಾದಿ ಮರಿಯಮ್ ಪಾತ್ರವನ್ನು ಮಾಡಿದ್ದಾರೆ. ಶೀಝಾನ್ ಅಲಿ ಬಾಬಾ ದಸ್ತಾನ್-ಇ-ಕಾಬೂಲ್ನಲ್ಲಿ ಅಲಿ ಬಾಬಾ ಆಗಿ ಕಾಣಿಸಿಕೊಂಡಿದ್ದಾರೆ.
6/ 7
ಚಹಾ ವಿರಾಮದ ನಂತರ ನಟಿ ವಾಶ್ ರೂಂಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗಲಿಲ್ಲ ಎಂದು ವರದಿಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ, ಪೊಲೀಸರು ಇದೀಗ ಕೊಲೆ ಮತ್ತು ಆತ್ಮಹತ್ಯೆ ಎರಡೂ ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
7/ 7
ಟಿವಿ ಸೀರಿಯಲ್ ಹೊರತಾಗಿ, ತುನಿಷಾ ಫಿತೂರ್ ಮತ್ತು ಬಾರ್ ಬಾರ್ ದೇಖೋ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು.