Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

Shraddha Kapoor Saree Looks: ಫ್ಯಾಶನ್ ವಿಷಯಕ್ಕೆ ಬಂದಾಗ ಸೀರೆ ಎಂದಿಗೂ ಔಟ್ ಆಫ್ ಫ್ಯಾಶನ್ ಅಲ್ಲ. ಹಬ್ಬ ಹರಿದಿನಗಳಲ್ಲಾಗಲೀ, ಮದುವೆಯಲ್ಲಾಗಲೀ, ರಾತ್ರಿಯ ಪಾರ್ಟಿಯಲ್ಲಾಗಲೀ ಸೀರೆ ಧರಿಸಬಹುದು. ನೀವು ಅದನ್ನು ಯಾವ ರೀತಿ ಉಡುತ್ತೀರಿ ಎನ್ನುವುದರ ಮೇಲೆ ಅದರ ಲುಕ್ ಅವಲಂಬಿಸಿದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸೀರೆ ಸಂಗ್ರಹವನ್ನು ನೋಡಿದ್ದೀರಾ?

First published:

  • 17

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ಸುಂದರವಾಗಿ ಸೀರೆ ಉಡಬೇಕೇ? ಸ್ವಲ್ಪ ಸ್ಟೈಲಿಷ್ ಆಗಿ ಡಿಫರೆಂಟಾಗಿ ಕಾಣಬೇಕೇ? ಹಾಗಿದ್ದರೆ ಶ್ರದ್ಧಾ ಕಪೂರ್ ಅವರ ಈ ಸೀರೆ ಫೋಟೋಗಳನ್ನು ನೋಡಿ. ನಟಿ ಪ್ರತಿಬಾರಿ ಸೀರೆ ಉಡುವಾಗಲೂ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ.

    MORE
    GALLERIES

  • 27

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಸಿರು ಬಣ್ಣದ ಸುಂದರವಾದ ಫ್ರಿಲ್ ಸೀರೆಯನ್ನು ಉಟ್ಟಿದ್ದಾರೆ. ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಿನ್ಯಾಸದ ಸೀರೆಯು ಯುವತಿರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಹುಡುಗಿಯರು ಸೀರೆಯಲ್ಲಿ ಡಿಫರೆಂಟ್ ಸ್ಟೈಲ್ ಟ್ರೈ ಮಾಡಲು ತುಂಬಾ ಇಷ್ಟಪಡುತ್ತಾರೆ. ನೆತ್ತಿಬೊಟ್ಟು, ಇಯರಿಂಗ್ಸ್, ಭಾರವಾದ ನೆಕ್ ಪೀಸ್ ಮತ್ತು ಕೈಯಲ್ಲಿ ಸಾಂಪ್ರದಾಯಿಕ ಬೆಳ್ಳಿಯ ಬಳೆಗಳು, ಶ್ರದ್ಧಾ ಅವರ ಈ ನೋಟವು ತುಂಬಾ ಸುಂದರವಾಗಿದೆ. ಈ ಸೀರೆಯು ಕ್ರಾಪ್ ಟಾಪ್ ವಿನ್ಯಾಸದ ಬ್ಲೌಸ್‌ನೊಂದಿಗೆ ಚೆನ್ನಾಗಿ ಒಪ್ಪುತ್ತದೆ.

    MORE
    GALLERIES

  • 37

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ನೀವು ಮದುವೆ ಅಥವಾ ಇನ್ನಾವುದೇ ಮದುವೆ ಸಮಾರಂಭದಲ್ಲಿ ಡಿಸೈನರ್ ಸೀರೆಯನ್ನು ಉಡಲು ಯೋಚಿಸುತ್ತಿದ್ದರೆ, ನೀವು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಈ ಲುಕ್ ಟ್ರೈ ಮಾಡಬಹುದು. ಈ ಲುಕ್‌ನಲ್ಲಿ ಶ್ರದ್ಧಾ ಕಪೂರ್ ಸಿಂಪಲ್ ಸೀರೆ ಉಟ್ಟಿದ್ದಾರೆ. ಆದರೆ ಬ್ಲೌಸ್ ತುಂಬಾ ಹೆವಿಯಾಗಿದ್ದು ಡಿಸೈನಿಂಗ್ ಮಾಡಲಾಗಿದೆ. ಪೀಚ್ ಪಿಂಕ್ ಬಣ್ಣದ ಈ ಲುಕ್‌ನಲ್ಲಿ ಶ್ರದ್ಧಾ ಕಪೂರ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಶ್ರದ್ಧಾ ಕಪೂರ್ ಅವರ ಸೀರೆಯ ಪಲ್ಲು ಕೂಡ ಹೆವಿ ವರ್ಕ್ ವಿನ್ಯಾಸದಿಂದ ಕೂಡಿದೆ.

    MORE
    GALLERIES

  • 47

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ಬ್ರೈಟ್ ಕಲರ್ ಸೀರೆಗಳು ಪ್ರತಿಯೊಬ್ಬ ಮಹಿಳೆಯ ವಾರ್ಡ್ರೋಬ್ನಲ್ಲಿ ಇರಲೇಬೇಕು. ಅಂತಹ ಸೀರೆಗಳೊಂದಿಗೆ ಹೆಚ್ಚಿನ ಆಭರಣಗಳನ್ನು ಧರಿಸುವ ಅಗತ್ಯವಿಲ್ಲ. ಶ್ರದ್ಧಾ ಕಪೂರ್ ಇಲ್ಲಿ ಕೆಂಪು, ಕಿತ್ತಳೆ ಮತ್ತು ಹಳದಿಯ ಬಹುವರ್ಣದ ಸೀರೆಯನ್ನು ಉಟ್ಟಿದ್ದಾರೆ. ಅದರೊಂದಿಗೆ ಕೆಂಪು ಬಣ್ಣದ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು.

    MORE
    GALLERIES

  • 57

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ಶ್ರದ್ಧಾ ಇಲ್ಲಿ ಸೀರೆಯನ್ನು ಬಾಡಿಕಾನ್ ಗೌನ್ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಸೊಂಟದ ಸುತ್ತಲೂ ಗೋಲ್ಡನ್ ವೇಸ್ಟ್‌ಬ್ಯಾಂಡ್ ಅನ್ನು ಸಹ ಧರಿಸಿದ್ದಾರೆ. ಗೋಲ್ಡನ್ ಹೈ ಹೀಲ್ಸ್ ಮತ್ತು ಸಾಂಪ್ರದಾಯಿಕ ಚೋಕರ್ ಆಭರಣಗಳಲ್ಲಿ ಶ್ರದ್ಧಾ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದಾರೆ.

    MORE
    GALLERIES

  • 67

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ಕೆಂಪು ಬಣ್ಣದ ಶಿಫಾನ್ ಅಥವಾ ಜಿಯೋಡ್ಸ್ ಸೀರೆಯನ್ನು ಹೊಸ ಸ್ಟೈಲ್​ನಲ್ಲಿ ಉಡಬಹುದು. ಶ್ರದ್ಧಾ ಕಪೂರ್ ಅವರಂತೆ ಕುರ್ತಿ ಟೈಪ್ ಬ್ಲೌಸ್ ಧರಿಸಿ. ಇಲ್ಲಿ ನಟಿ ಗ್ಲಾಸ್ ವರ್ಕ್ ಬ್ಲೌಸ್ ಜೊತೆಗೆ ಸಾದಾ ಸೀರೆಯನ್ನು ಉಟ್ಟಿದ್ದಾರೆ. ಬೆಳ್ಳಿಯ ನೆತ್ತಿಬೊಟ್ಟು ಮತ್ತು ಬಳೆಯನ್ನು ಧರಿಸಿ ಶ್ರದ್ಧಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

    MORE
    GALLERIES

  • 77

    Shraddha Kapoor: ಶ್ರದ್ಧಾ ಕಪೂರ್ ಸೀರೆ ಉಟ್ರೂ ಸಖತ್ ಡಿಫರೆಂಟಾಗಿರುತ್ತೆ

    ನಟಿ ಮಾಡರ್ನ್ ಡ್ರೆಸ್​ನಲ್ಲಿಯೂ ಕ್ಯೂಟ್ ಆಗಿ ಕಾಣುತ್ತಾರೆ. ಬಾಲಿವುಡ್​ನಲ್ಲಿ ಬೇಡಿಕೆಯಲ್ಲಿರುವ ನಟಿಯರಲ್ಲಿ ಶ್ರದ್ಧಾ ಕೂಡಾ ಒಬ್ಬರು.

    MORE
    GALLERIES