ಸುಶಾಂತ್ ಸಿಂಗ್ ಆತ್ಮಹತ್ಯೆ ದಿನ ನಡೆದಿದ್ದೇನು? - ಅಡುಗೆ ಕೆಲಸದವ ಬಿಚ್ಚಿಟ್ಟ ಸತ್ಯ
ರಿಯಾ ಹಾಗೂ ಸುಶಾಂತ್ ಇಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಯೂರೋಪ್ ಪ್ರವಾಸ ಮಾಡಿ ಬಂದ ಬಳಿಕ ಸುಶಾಂತ್ ಚೆನ್ನಾಗಿರಲಿಲ್ಲ. ಅವಾಗಲೇ ಸುಶಾಂತ್ ಬದಲಾಗಿದ್ದಾರೆ ಎಂದಿದ್ದಾರೆ ನೀರಜ್.
News18 Kannada | August 2, 2020, 5:27 PM IST
1/ 7
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡಿದೆ. ಇವರ ಆಪ್ತವಲಯ ಸುಶಾಂತ್ ಆತ್ಮಹತ್ಯೆ ಬಗ್ಗೆ ಭಿನ್ನಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ.
2/ 7
ಜೂನ 14ನೇ ತಾರೀಕಿನಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದು ಅಸಲಿಗೆ ನಡೆದಿದ್ದೇನು? ಎನ್ನುವುದರ ಕುರಿತು ಅಡುಗೆ ಕೆಲಸದ ನೀರಜ್ ಮಾತಾಡಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸುಶಾಂತ್-ರಿಯಾ ಸಂಬಂಧದ ಬಗ್ಗೆ ನೀಡಿದ್ದಾರೆ.
3/ 7
ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಜೂನ್ 13ರ ರಾತ್ರಿ ಸುಶಾಂತ್ ಸರ್ ಊಟ ಮಾಡಿರಲಿಲ್ಲ. ನಾನು ಮ್ಯಾಂಗೋ ಶೇಕ್ ಜ್ಯೂಸ್ ಮಾಡಿಕೊಟ್ಟೇ ಎಂದ ನೀರಜ್, ಜೂನ್ 14ರಂದು ಬೆಳಿಗ್ಗೆ ಕೋಣೆಯಿಂದ ಹೊರ ಬಂದು ಕೋಲ್ಡ್ ನೀರು ಕೇಳಿದ್ದರು ಎಂದರು.
4/ 7
ಸುಶಾಂತ್ ಸರ್ ಆರೋಗ್ಯವಾಗಿದ್ದಂತೆ ಕಾಣಿಸಲಿಲ್ಲ. ಯಾಕೋ ಸ್ಪಲ್ಪ ಟೆನ್ಷನ್ ಆಗಿದ್ದರು. ನನ್ನ ಸ್ನೇಹಿತ ಕೇಶವ್ ಬಳಿ ತಿಂಡಿ ಬದಲಿಗೆ ಎಳನೀರು, ಆರೆಂಜ್ ಜ್ಯೂಸ್, ಬಾಳೆಹಣ್ಣು ಬೇಕು ಎಂದಿದ್ದರು.
5/ 7
ನಮ್ಮೊಂದಿಗೆ ಮಾತಾಡಿದ ನಂತರ ರೂಮ್ನೊಳಗೆ ಹೋಗಿದ್ದರು. ಮತ್ತೆ ಮಧ್ಯಾಹ್ನ ಊಟಕ್ಕೆ ಏನು ಬೇಕು ಎಂದು ಕೇಳಲು ಹೋದಾಗ ಸುಶಾಂತ್ ಸರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕಾಲ್ ಕೂಡ ರಿಸೀವ್ ಮಾಡಲಿಲ್ಲ ಎಂದರು ನೀರಜ್.
6/ 7
ಆಗ ನಾವು ಬಾಗಿಲು ತೆರೆಯಲು ಯತ್ನಿಸಿದೆವು, ಆದರೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಬಾಗಿಲ ಬೀಗ ಒಡೆಯುವವರನ್ನು ಕರೆಸಿದೆವು. ಬಾಗಿಲು ತೆಗೆದು ಒಳಗೆ ಹೋದಾಗ ಸುಶಾಂತ್ ಸಿಂಗ್ ಹೆಣವಾಗಿದ್ದರು. ಸುಶಾಂತ್ ಸಹೋದರಿ ಹೇಳಿದ ಕಾರಣಕ್ಕೆ ನಾವು ದೇಹವನ್ನು ಕೆಳಗಿಸಿದ್ದೆವು ಎಂದರು.
7/ 7
ರಿಯಾ ಹಾಗೂ ಸುಶಾಂತ್ ಇಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಯೂರೋಪ್ ಪ್ರವಾಸ ಮಾಡಿ ಬಂದ ಬಳಿಕ ಸುಶಾಂತ್ ಚೆನ್ನಾಗಿರಲಿಲ್ಲ. ಅವಾಗಲೇ ಸುಶಾಂತ್ ಬದಲಾಗಿದ್ದಾರೆ ಎಂದಿದ್ದಾರೆ. ಅಲ್ಲದೇ ರಿಯಾ ಒಮ್ಮೆ ನೀರಜ್ಗೆ ಕೆಲಸ ವಿಷಯದಲ್ಲಿ ಬೆದರಿಕೆ ಹಾಕಿದ್ದರು ಎಂಬುದನ್ನು ತಿಳಿಸಿದ್ದಾರೆ ನೀರಜ್.