ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರ ವೇದ ಇಂದು ರಾಜ್ಯಾಂದ್ಯತ ಬಿಡುಗಡೆಯಾಗಿದೆ. ಈ ಸಿನಿಮಾ ಶಿವಣ್ಣ ಅಭಿನಯದ 125ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷವಾಗಿದೆ. ವೇದ ಸಿನಿಮಾ ಶಿವಕುಮಾರ್ ಹೋಮ್ ಪ್ರೊಡಕ್ಷನ್ ನ ಮೊದಲ ಸಿನಿಮಾ ಆಗಿದೆ.
ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ‘ವೇದ’ವನ್ನು ಪತ್ನಿ ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಮೊದಲ ಸಿನಿಮಾವನ್ನು ತಾಯಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸಿದ್ರು. 125ನೇ ಸಿನಿಮಾವನ್ನು ಪತ್ನಿ ಗೀತಾ ನಿರ್ಮಾಣ ಮಾಡಿದ್ದಾರೆ.
2/ 8
ವೇದ ಸಿನಿಮಾ ನಿರ್ಮಾಣದ ಹೊರೆ ಹೊತ್ತ ಗೀತಾ ಶಿವರಾಜ್ಕುಮಾರ್ ಬಗ್ಗೆ ಶಿವಣ್ಣ ಮಾತಾಡಿದ್ದು, ಗೀತಾ ಅವರನ್ನು ಕೊಂಡಾಡಿದ್ದಾರೆ.
3/ 8
ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ. ಆನಂದ್ ಸಿನಿಮಾದಿಂದ ವೇದ ಸಿನಿಮಾದವರೆಗೂ ನನ್ನ ಸಿನಿಪಯಣ ಆನಂದವೇದವಾಗಿದೆ ಎಂದು ಭಾವಿಸುತ್ತೇನೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಶಿವರಾಜ್ ಕುಮಾರ್ ಹೇಳಿದ್ದಾರೆ.
4/ 8
ಆನಂದ್ ಸಿನಿಮಾ ದಿನಗಳನ್ನು ಮೆಲುಕು ಹಾಕಿದ ನಟ ಶಿವರಾಜ್ ಕುಮಾರ್, ವೇದ ರಿಲೀಸ್ ನಲ್ಲೂ ಮೊದಲ ಸಿನಿಮಾ ರಿಲೀಸ್ ಆದಾಗ ಇದ್ದ ಅದೇ ಭಯವಿದೆ ಎಂದು ಹೇಳಿದ್ದಾರೆ.
5/ 8
ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ ಎಂದ ಶಿವರಾಜ್ ಕುಮಾರ್ ಗೀತಾಳಲ್ಲಿ ಅಮ್ಮನ ಗುಣವಿದೆ ಎಂದು ಹೇಳಿದ್ದಾರೆ.
6/ 8
ವೇದ ಸಿನಿಮಾವನ್ನು ಬೇರೊಬ್ಬರು ನಿರ್ಮಾಣ ಮಾಡಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ವೇದ ಸಿನಿಮಾವನ್ನು ನಮ್ಮದೇ ಬ್ಯಾನರ್ ನಡಿ ಮಾಡಲು ನಿರ್ಧರಿಸಿದೆವು ಎಂದು ಶಿವಣ್ಣ ಹೇಳಿದ್ದಾರೆ.
7/ 8
[caption id="attachment_917776" align="alignnone" width="525"] ಗೀತಾಳಿಗೆ ಅಮ್ಮನ ಗುಣಗಳೇ ಇವೆ. ಅದು ಊಟದ ವಿಷಯದಲ್ಲೇ ಆಗಿರಲಿ ಅಥವಾ ಸಂಭಾವನೆ ವಿಚಾರದಲ್ಲೇ ಆಗಿರಲಿ, ಎಂದಿಗೂ ಯಾರಿಗೂ ಕಮ್ಮಿ ಮಾಡಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.
[/caption]
8/ 8
ಪ್ರತಿಯೊಬ್ಬರೂ ನನಗಿಂತಲೂ ಹೆಚ್ಚಾಗಿ ಗೀತಾಳನ್ನು ಇಷ್ಟಪಡುತ್ತಿದ್ದಾರೆ. ಗೀತಾ ಪಿಕ್ಚರ್ಸ್ನಡಿ ಕೇವಲ ನನ್ನ ಸಿನಿಮಾಗಳಷ್ಟೇ ಅಲ್ಲ, ಒಳ್ಳೆಯ ಕಥೆ ಬಂದ್ರೆ ಬೇರೆಯವರ ಸಿನಿಮಾಗಳನ್ನು ಖಂಡಿತವಾಗಿಯೂ ಮಾಡುತ್ತೇವೆ ಎಂದು ಶಿವಣ್ಣ ಹೇಳಿದ್ರು.