ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಟ ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಬಗ್ಗೆ ಶಿವರಾಜ್ಕುಮಾರ್ ಅವರು ಮಾಹಿತಿ ನೀಡಿದ್ದಾರೆ. (ಚಿತ್ರಗಳು ರಾಘವೇಂದ್ರ ರಾಜ್ಕುಮಾರ್ ಟ್ವಿಟರ್ ಖಾತೆ)
ನಿನ್ನೆ ಬೆಳಕು ಸಿನಿಮಾದ ಚಿತ್ರೀಕರಣದ ವೇಳೆ ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು.
2/ 11
ಇಂದು ಅವರಿಗೆ ಐಸಿಡಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಶಿವರಾಜ್ಕುಮಾರ್ ತಿಳಿಸಿದ್ದಾರೆ.
3/ 11
ನಾಳೆ ಸಂಜೆ ರಾಘವೇಂದ್ರ ರಾಜ್ಕುಮಾರ್ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆಯಂತೆ.
4/ 11
ರಾಘವೇಂದ್ರ ರಾಜ್ಕುಮಾರ್ ಅವರಿಗೆ ತುಂಬಾ ಚಿಕ್ಕದಾದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
5/ 11
ಹೃದಯ ಬಡಿತ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದ್ದ ಕಾರಣದಿಂದ ಅವರಿ ಐಸಿಡಿ ಎಂಬ ಚಿಕ್ಕದಾದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆಯಂತೆ.
6/ 11
ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯ ಚೆನ್ನಾಗಿದೆ. ಅವರು ಇನ್ನೂ ಹಲವಾರು ಸಿನಿಮಾಗಳನ್ನು ಮಾಡುತ್ತಾರೆ ಎಂದು ಶಿವಣ್ಣ ಹೇಳಿದ್ದಾರೆ.
7/ 11
ರಾಘವೇಂದ್ರ ರಾಜ್ಕುಮಾರ್ ಸೋದರ ಮಾವ ಚಿನ್ನೇ ಗೌಡರೂ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಘು ಆರಾಮಾಗಿ ಇದ್ದಾನೆ. ಅಭಿಮಾನಿಗಳ ಹಾರೈಕೆ ಅವನಿಗಿದೆ ಎಂದಿದ್ದಾರೆ.
8/ 11
ರಾಘವೇಂದ್ರ ರಾಜ್ಕುಮಾರ್ ಅವರು ಈ ಹಿಂದೆಯೂ ಆರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
9/ 11
ಇತ್ತೀಚೆಗಷ್ಟೆ ಅವರ ಅಭಿನಯದ ರಾಜತಂತ್ರ ಸಿನಿಮಾ ರಿಲೀಸ್ ಆಗಿತ್ತು.
ರಾಘವೇಂದ್ರ ರಾಜ್ಕುಮಾರ್ ಸೋದರ ಮಾವ ಚಿನ್ನೇ ಗೌಡರೂ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಘು ಆರಾಮಾಗಿ ಇದ್ದಾನೆ. ಅಭಿಮಾನಿಗಳ ಹಾರೈಕೆ ಅವನಿಗಿದೆ ಎಂದಿದ್ದಾರೆ.