ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಜನವರಿ 12ರಂದು ಬೆಳ್ಳಂಬೆಳಗ್ಗೆ ಭೇಟಿ ಮಾಡಿದ್ದಾರೆ.
2/ 7
ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಸಿಎಂ ಅವರನ್ನು ಭೇಟಿ ಮಾಡಿದ್ದು ಈ ಸಂದರ್ಭ ಮಾಧ್ಯಮಗಳಿಗೆ ಫೋಟೋ ತೆಗೆಯುವ ಅವಕಾಶವಿರಲಿಲ್ಲ.
3/ 7
ಆರ್ ಟಿ ನಗರದ ಸಿಎಂ ನಿವಾಸದಲ್ಲಿ ಸಿಎಂ ಭೇಟಿಯಾದ ಶಿವರಾಜ್ ಕುಮಾರ್ ಅವರು ಯಾವುದೋ ಆಹ್ವಾನ ಪತ್ರಿಕೆ ನೀಡಲು ಹೋಗಿದ್ದರು ಎನ್ನಲಾಗಿದೆ. ಆದರೆ ಅಸಲಿ ಕಾರಣ ತಿಳಿದುಬಂದಿಲ್ಲ.
4/ 7
ನಟ ಶಿವರಾಜ್ಕುಮಾರ್ ಅವರು ಹಾಗೂ ಬೊಮ್ಮಾಯಿ ಅವರದ್ದು ರಹಸ್ಯ ಭೇಟಿಯಾಗಿದ್ದು ಫೋಟೋಗಳಿಗೆ ಅವಕಾಶ ಇರಲಿಲ್ಲ ಎನ್ನಲಾಗಿದೆ. ಹಾಗೆಯೇ ಯಾವುದೇ ಫೋಟೋಗಳೂ ಲಭ್ಯವಾಗಿಲ್ಲ.
5/ 7
ಬಸವರಾಜ್ ಬೊಮ್ಮಾಯಿ ಅವರನ್ನು ಶಿವಣ್ಣ ಪತ್ನಿ ಸಮೇತರಾಗಿ ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಇದು ರಹಸ್ಯ ಭೇಟಿ ಎಂದು ಹೇಳಲಾಗುತ್ತಿದ್ದು ಯಾವುದೇ ಅಪ್ಡೇಟ್ ಹೊರಬಿದ್ದಿಲ್ಲ.
6/ 7
ವಿಧಾನಸಭಾ ಚುನಾವಣೆ ನಡೆಯಲಿದ್ದು ಸ್ಟಾರ್ ನಟ ಸಿಎಂ ಅವರನ್ನು ಈ ರೀತಿ ರಹಸ್ಯವಾಗಿ ಭೇಟಿ ಮಾಡಿದ್ದು ಹಲವು ಚರ್ಚೆಗೆ ಕಾರಣವಾಗಿದೆ. ಈ ಬೇಟಿಯ ನಿಜವಾದ ಉದ್ದೇಶ ರಿವೀಲ್ ಆಗಿಲ್ಲ.
7/ 7
ಚುನಾವಣೆ ಸಂದರ್ಭ ಸ್ಟಾರ್ ನಟರು ರಾಜಕಾರಣಿಗಳನ್ನು ಭೇಟಿ ಮಾಡುವುದು ಕಾಮನ್. ಈ ರೀತಿಯ ಭೇಟಿ ಹೊಸ ಚರ್ಚೆಗಳಿಗೆ ದಾರಿ ಮಾಡುತ್ತದೆ. ಶಿವಣ್ಣ ಸಿಎಂ ಭೇಟಿಯ ಬಗ್ಗೆ ಹೆಚ್ಚಿ ನ ಅಪ್ಡೇಟ್ಗಳು ಇನ್ನಷ್ಟೆ ಬರಬೇಕಿದೆ.