ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಂಗಳೂರಿನಲ್ಲಿರುವ ಕೊರಗಜ್ಜನ ಆದಿಸ್ಥಳ ಕುತ್ತಾರು ಎಂಬಲ್ಲಿಗೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದಾರೆ.
2/ 8
ಪತ್ನಿ ಗೀತಾ ಹಾಗೂ ಮಗಳೊಂದಿಗೆ ಕುತ್ತಾರಿಗೆಗೆ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.
3/ 8
ಕೊರಗಜ್ಜ ದೈವದ ಆದಿ ಸ್ಥಳ ಕುತ್ತಾರು ಕ್ಷೇತ್ರ ಎಲ್ಲೆಡೆ ಪ್ರಸಿದ್ಧ. ಎಲ್ಲೆಡೆ ಕಾಣ ಸಿಗುವ ಕೊರಗಜ್ಜನ ಕಟ್ಟೆಗಳಿಗೆ ಇದುವೇ ಮೂಲಸ್ಥಳ.
4/ 8
ಕೊರಗಜ್ಜ ನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟ ಶಿವರಾಜ್ ಕುಮಾರ್ ಅವರ ಜೊತೆ ವೇದ ಚಿತ್ರತಂಡ ಕೂಡಾ ಈ ಪ್ರಸಿದ್ಧ ತಾಣಕ್ಕೆ ಭೇಟಿ ಕೊಟ್ಟಿದೆ.
5/ 8
ವೇದ ಚಿತ್ರದ ಪ್ರಮೋಷನ್ ಗಾಗಿ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಮಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ಪಣಂಬೂರು ಕಡಲಕಿನಾರೆಯಲ್ಲಿ ನಡೆಯಲ್ಲಿ ವೇದ ಚಿತ್ರದ ಪ್ರಮೋಶನ್ ಡೆಯಲಿದೆ.
6/ 8
ಕುತ್ತಾರು ಕೊರಗಜ್ಜನ ದೇವಾಲಯ ಅತ್ಯಂತ ಪ್ರಸಿದ್ಧ ಸ್ಥಳವಾಗಿದ್ದು ಇಲ್ಲಿ ಬಹಳಷ್ಟು ರೀತಿಯ ಸೇವೆಗಳು ನಡೆಯುತ್ತವೆ. ಅಂದುಕೊಂಡಿದ್ದು ನಡೆಸಿಕೊಡುವ ಈ ಪವಾಡ ದೇವಾಲಯಕ್ಕೆ ನಿತ್ಯ ನೂರಾರು ಮಂದಿ ಭೇಟಿಕೊಡುತ್ತಾರೆ.
7/ 8
ವಿವಾಹ, ಆರೋಗ್ಯ, ದಾಂಪತ್ಯ, ವಿದ್ಯಾಭ್ಯಾಸ ಸೇರಿಂದತೆ ವಿವಿಧ ಕಾರಣಗಳಿಗೆ ಹರಕೆ ಹೇಳುವ ಜನರು ಇಲ್ಲಿ ಬಂದು ಸೇವೆ ಸಲ್ಲಿಸಿ ಹೋಗುತ್ತಾರೆ. ಇದು ಎಲ್ಲ ಕೊರಗಜ್ಜ ದೇವಸ್ಥಾನಗಳಲ್ಲಿ ಪ್ರಮುಖವಾದದ್ದು.
8/ 8
ಈಗ ಚಿತ್ರತಂಡ ಮಂಗಳೂರಿನಲ್ಲಿದ್ದು ಈ ಪ್ರಸಿದ್ಧ ದೇವಾಲಯಕ್ಕೆ ಎಲ್ಲರೂ ಒಟ್ಟಾಗಿ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದು ಬಹಳಷ್ಟು ವಿಶೇಷವಾಗಿದೆ.