'ಸಲಗ'ದ ಬೆನ್ನಿಗೆ ನಿಂತ ಶಿವಣ್ಣ; ಹೊಸ ವರ್ಷಕ್ಕೆ ಫಸ್ಟ್ ಸಾಂಗ್ ರಿಲೀಸ್
ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಸೇರಿದಂತೆ ಡಾಲಿ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುಧೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಡಿಯಲ್ಲಿ ‘ಟಗರು‘ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ‘ಸಲಗ‘ ಸಿನಿಮಾವನ್ನು ನಿರ್ಮಿಸ್ತಿದ್ದಾರೆ.
ಸ್ಯಾಂಡಲ್ ವುಡ್ನ ಬ್ಲಾಕ್ ಕೋಬ್ರಾ ವಿಜಯ್ ‘ಸಲಗ‘ ಚಿತ್ರದ ಮೂಲಕ ದುನಿಯಾ ತೋರಿಸಲು ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಸ ತಂಡದೊಂದಿಗೆ ‘ಸಲಗ‘ ಸಿನಿಮಾದಲ್ಲಿ ನಟ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಈ ಸಿನಿಮಾದ ನಿರ್ದೇಶನವನ್ನು ಕೂಡ ವಿಜಯ್ ಮಾಡುತ್ತಿದ್ದಾರೆ.
2/ 6
ಈಗಾಗಲೇ ‘ಸಲಗ‘ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಇತ್ತೀಚೆಗೆ ‘ಸಲಗ‘ ಚಿತ್ರತಂಡ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೀಗ ಚಿತ್ರತಂಡ ಮತ್ತೊಂದು ಸಿಹಿ ಸುದ್ದಿಯನ್ನು ಕೊಟ್ಟಿದೆ. ಏನದು ಗೊತ್ತಾ?
3/ 6
ಜನವರಿ 5ನೇ ತಾರೀಖು ಸಲಗ ಚಿತ್ರದ ಮೊದಲ ಆಡಿಯೋ ಸಾಂಗ್ ಅಂದ್ರೆ ಲಿರಿಕಲ್ ವಿಡಿಯೋನ ರಿಲೀಸ್ ಮಾಡುತ್ತಿದೆ.
4/ 6
ವಿಶೇಷ ಅಂದ್ರೆ, ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ರಿಲೀಸ್ ಮಾಡುತ್ತಿದ್ದಾರೆ.
5/ 6
ಎ2 ಯೂಟ್ಯೂಬ್ ಚಾನೆಲ್ ನಲ್ಲಿ ಮೊದಲ ಹಾಡನ್ನು ಶಿವಣ್ಣ ಲೋಕಾರ್ಪಣೆ ಮಾಡಲಿದ್ದಾರೆ. ಅವರದ್ದೇ ‘ಟಗರು‘ ಟೀಮ್ ಮಾಡುತ್ತಿರುವ ‘ಸಲಗ‘ ಚಿತ್ರಕ್ಕೆ ಶಿವರಾಜ್ ಕುಮಾರ್ ಮುಕ್ತ ಕಂಠದಿಂದ ಶುಭಹಾರೈಸಿದ್ದು, ಸಲಗದ ಬೆನ್ನಿಗೆ ನಿಂತಿದ್ದಾರೆ.
6/ 6
ಇನ್ನು ಸಲಗ ಚಿತ್ರದಲ್ಲಿ ಡಾಲಿ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುಧೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಡಿಯಲ್ಲಿ ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸಲಗ ಸಿನಿಮಾವನ್ನು ನಿರ್ಮಿಸ್ತಿದ್ದಾರೆ.