ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರ ಜೀವನದಲ್ಲಿ ಓಂ ಸಿನಿಮಾ ತುಂಬಾ ಮಹತ್ವದ ಚಿತ್ರ ಆಗಿದೆ. ಇಡೀ ಇಂಡಸ್ಟ್ರೀ ತಿರುಗಿ ನೋಡುವಂತೆ ಮಾಡಿರೋ ಈ ಚಿತ್ರ ತೆರೆಗೆ ಬಂದು 28 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಕನ್ನಡದ ಈ ಕಲ್ಟ್ ಸಿನಿಮಾ, ಮರು ರಿಲೀಸ್‌ನಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದೆ. ಕಾರಣ 550 ಬಾರಿ ಓಂ ಸಿನಿಮಾ ಮರು ಬಿಡುಗಡೆ ಆಗಿದೆ.