Goaದಲ್ಲಿ ಏನು ಮಾಡ್ತಿದ್ದಾರೆ Shilpa Shetty: ಸೀಕ್ರೆಟ್ ಪ್ರಾಜೆಕ್ಟ್ನಲ್ಲಿ ಕರಾವಳಿ ಸುಂದರಿ..!
ಶಿಲ್ಪಾ ಶೆಟ್ಟಿ (Shilpa Shetty) ಮತ್ತೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯರಾಗಿದ್ದಾರೆ. ತಮ್ಮ ಡ್ಯಾನ್ಸ್ ವಿಡಿಯೋ ಹಾಗೂ ಫೋಟೋಶೂಟ್ಗಳ ಮೂಲಕ ಮತ್ತೆ ರಂಜಿಸಲಾರಂಭಿಸಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ತಮ್ಮ ಸೀಕ್ರೆಟ್ ಪ್ರಾಜೆಕ್ಟ್ಗಾಗಿ ಗೋವಾ ಸೇರಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ನಟಿ ಶಿಲ್ಪಾ ಶೆಟ್ಟಿ ಕೆಂಪು ಬಣ್ಣದ ಹಾಫ್ ಶೋಲ್ಡರ್ ಡ್ರೆಸ್ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಕ್ಲಾಸಿ ಲುಕ್ನಲ್ಲಿ ಕಾಣಿಸಿಕೊಂಡಿರುವ ಕರಾವಳಿ ಸುಂದರಿಯ ಫೋಟೋಗಳು ವೈರಲ್ ಆಗಿವೆ. ಅಷ್ಟಕ್ಕೂ ಈ ಫೋಟೋಶೂಟ್ ಆಗಿರುವುದಾದರೂ ಎಲ್ಲಿ ಗೊತ್ತಾ..:?
2/ 7
ಶಿಲ್ಪಾ ಶೆಟ್ಟಿ ಸದ್ಯ ಗೋವಾದಲ್ಲಿದ್ದಾರೆ. ಅವರು ತಮ್ಮ ಸೀಕ್ರೆಟ್ ಪ್ರಾಜೆಕ್ಟ್ಗಾಗಿ ಗೋವಾ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಪ್ರಾಜೆಕ್ಟ್ ಯಾವುದು ಅನ್ನೋ ಮಾಹಿತಿ ಮಾತ್ರ ಇನ್ನೂ ಲಭ್ಯವಾಗಿಲ್ಲ.
3/ 7
ಹಂಗಾಮ 2 ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ಮತ್ತಾವಾ ಚಿತ್ರವನ್ನೂ ಪ್ರಕಟಿಸಿಲ್ಲ. ಆದರೆ, ರಿಯಾಲಿಟಿ ಡ್ಯಾನ್ಸ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಈಗ ಈ ಸೀಕ್ರೆಟ್ ಪ್ರಾಜೆಕ್ಟ್ ಸಹ ಸೇರಿಕೊಂಡಿದೆ.
4/ 7
ಗೋವಾದಲ್ಲಿರುವ ಶಿಲ್ಪಾ ಶೆಟ್ಟಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಗೋವಾದ ಖ್ಯಾತ ಸೇಂಟ್ ಆಂಥೋನಿ ಚರ್ಚ್ಗೆ ಹೋಗಿದ್ದ ನಟಿ ಅದನ್ನು ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
5/ 7
ಇನ್ನು ಪತಿ ರಾಜ್ ಕುಂದ್ರಾ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ನಂತರ, ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶೆರ್ಲಿನ್ ಚೋಪ್ರಾ ಮೇಲೆ ಮಾನಹಾನಿ ಮೊಕದ್ದಮ್ಮೆ ಹೂಡಿದ್ದಾರೆ. 50 ಕೋಟಿ ಮಾನಹಾನಿ ಮೊಕದ್ದಮೆ ಹೂಡಿರುವುದಾಗಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರ ವಕೀಲರು ಮೊನ್ನೆಯಷ್ಟೆ ಸ್ಪಷ್ಟಪಡಿಸಿದ್ದಾರೆ.
6/ 7
ಹಣಕ್ಕಾಗಿ ಶೆರ್ಲಿನ್ ಚೋಪ್ರಾ ಅವರು ಸುಳ್ಳು ಆರೋಪಗಳನ್ನು ಮಾಡಿದ್ದು, ಇದರಿಂದ ಮಾನಹಾನಿಯಾಗಿದೆ ಎಂದು ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಅವರು ಶೆರ್ಲಿನ್ ಚೋಪ್ರಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
7/ 7
ನಟಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಕಟ್ ಮಾಡಿಸಿಕೊಂಡಿದ್ದು, ಅದರ ವಿಷಯವನ್ನೂ ಹಂಚಿಕೊಂಡಿದ್ದರು. ಅಂಡರ್ಕಟ್ ಬಸ್ ಹೇರ್ ಕಟ್ ಮಾಡಿಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.