2007ರಲ್ಲಿ ನಡೆದ ಕಿಸ್ಸಿಂಗ್ ಘಟನೆಗೆ ಸಂಬಂಧಿಸಿ ಈಗ ಮತ್ತೆ ಹೊಸ ಅಪ್ಡೇಟ್ ಬಂದಿದೆ. ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಸಾರ್ವಜನಿಕವಾಗಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ್ದ ಘಟನೆ ವಿವಾದ ಸೃಷ್ಟಿಸಿತ್ತು.
2/ 7
ಅಮೆರಿಕನ್ ನಟ ಭಾರತಕ್ಕೆ ಬಂದಿದ್ದಾಗ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಶಿಲ್ಪಾ ಶೆಟ್ಟಿ ವಿರುದ್ಧ ಅಶ್ಲೀಲತೆ ವಿರೋಶಿಸಿ ದೂರು ನೀಡಲಾಗಿತ್ತು.
3/ 7
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ವಿರುದ್ಧ ಸಲ್ಲಿಸಲಾದ ಅಶ್ಲೀಲತೆಯ ದೂರನ್ನು ವಜಾ ಮಾಡಲು ನಟಿ ಸಲ್ಲಿಸಿದ ಮನವಿ ಸಂಬಂಧ ಕೋರ್ಟ್ ಪ್ರತಿಕ್ರಿಯಿಸಿದೆ. ಈ ಕುರಿತು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
4/ 7
ಬಾರ್ & ಬೆಂಚ್ನಲ್ಲಿರುವ ವರದಿಯ ಪ್ರಕಾರ, ನ್ಯಾಯಮೂರ್ತಿ ಆರ್ಜಿ ಅವಚತ್ ಅವರ ಏಕಸದಸ್ಯ ಪೀಠವು ಜೈಪುರದಲ್ಲಿ ದೂರು ಸಲ್ಲಿಸಿದ ವಕೀಲರಿಗೆ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ದೂರುದಾರರನ್ನು ಕೇಳಿದೆ. ಪ್ರಕರಣವನ್ನು 4 ವಾರಗಳ ನಂತರ ವಿಚಾರಣೆಗೆ ಮುಂದೂಡಲಾಗಿದೆ.
5/ 7
ವರದಿಯ ಪ್ರಕಾರ ಶನಿವಾರದ ವಿಚಾರಣೆಯ ಸಂದರ್ಭದಲ್ಲಿ, ವಕೀಲ ಮಧುಕರ್ ದಳವಿ ಅವರು 2007 ರ ಇವೆಂಟ್ ವೀಡಿಯೊವನ್ನು ನೋಡಿದರೆ, ಶಿಲ್ಪಾ ಶೆಟ್ಟಿ ಅವರು ಸಾರ್ವಜನಿಕವಾಗಿ ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ ಎಂದಿದ್ದಾರೆ.
6/ 7
ದಳವಿ ಸಲ್ಲಿಸಿದ ವರದಿಯ ಪ್ರಕಾರ, ದತ್ತಿ ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇವೆಂಟ್ ನಡೆಸಲಾಗಿತ್ತು. ಸೆಲೆಬ್ರಿಟಿಗಳು ಭಾಗಿಯಾಗಿರುವುದರಿಂದ ಅನಗತ್ಯ ಪ್ರಚಾರಕ್ಕಾಗಿ ಘಟನೆಗೆ ಕೆಟ್ಟ ಆ್ಯಂಗಲ್ ಕೊಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
7/ 7
ಈ ಪ್ರಕರಣ ನಡೆದು ಈಗಾಗಲೇ 16 ವರ್ಷಗಳಾಗಿದ್ದರೂ ಈ ಕೇಸ್ ಮಾತ್ರ ಇನ್ನೂ ನಡೆಯುತ್ತಲೇ ಇದೆ. ಇವರ ಕಿಸ್ಸಿಂಗ್ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿತ್ತು.