ರಿಯಾಲಿಟಿ ಶೋಗೆ ಮರಳಿದ ನಟಿ ಶಿಲ್ಪಾ ಶೆಟ್ಟಿ ಬರೆದುಕೊಂಡಿರುವ ಒಂದೇ ವಾಕ್ಯಕ್ಕೆ ಇದೆ 100 ಅರ್ಥ!
Shilpa Shetty: ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಬಂಧನವಾದ ಸುಮಾರು ಒಂದು ತಿಂಗಳ ನಂತರ ನಟಿ ಶಿಲ್ಪಾ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸ್ 4 ಸೆಟ್ ಗೆ ಮರಳಿದ್ದಾರೆ. ಪತಿ ಜೈಲಿನಲ್ಲಿದ್ದು, ಶಿಲ್ಪಾ ತಮ್ಮ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ರಿಯಾಲಿಟಿ ಶೋ ಜಡ್ಜ್ ಆಗಿ ಭಾಗಿಯಾದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋದೊಂದಿಗೆ ಖಡಕ್ ಸಂದೇಶವನ್ನು ನೀಡಿದ್ದಾರೆ.
[caption id="attachment_612921" align="aligncenter" width="1200"] ಮಹಿಳೆ ಯಾವುದೇ ಕಷ್ಟದಿಂದ ಎದ್ದು ನಿಲ್ಲಲು ನಿರ್ಧರಿಸಿದರೆ ಅವಳಷ್ಟು ಶಕ್ತಿಶಾಲಿ ಇನ್ನೊಬ್ಬರಿಲ್ಲ ಎಂದು ಬರೆದುಕೊಂಡಿದ್ದಾರೆ.
[/caption]
2/ 9
ಎಲ್ಲಾ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ನಾನು ಮತ್ತಷ್ಟು ಸ್ಟ್ರಾಂಗ್ ಆಗಿದ್ದೀನಿ ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.
3/ 9
ನೀಲಿ ಮತ್ತು ಕೆಂಪು ಬಣ್ಣದ ಸೀರೆಯುಟ್ಟು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಫೋಟೋಗೆ ಕೃತಜ್ಞತೆ, ಆಶೀರ್ವಾದ ಎಂದು ಹ್ಯಾಷ್ ಟ್ಯಾಗ್ ಹಾಕಿರುವುದು ಎಲ್ಲರ ಗಮನ ಸೆಳೆದಿದೆ.
4/ 9
ಶಿಲ್ಪಾ ಭಾಗಿಯಾಗಿರುವ ಸೂಪರ್ ಡ್ಯಾನ್ಸರ್ 4 ಶೋ ವಾರಾಂತ್ಯದಲ್ಲಿ ಪ್ರಸಾರವಾಗುತ್ತದೆ. ಪತಿಯ ಬಂಧನದ ನಂತರ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದಾರೆ.
5/ 9
ಕಾರ್ಯಕ್ರಮದ ನಿರ್ಮಾಪಕ ರಂಜಿತ್ ಠಾಕೂರ್ ಮಾತನಾಡಿ ಶಿಲ್ಪಾ ನಮ್ಮ ಕಾರ್ಯಕ್ರಮದ ಜಡ್ಜ್, ಅವರು ಈಗಲೂ ಶೋನಲ್ಲಿ ಮುಂದುವರೆದಿದ್ದಾರೆ ಎಂದು ತಿಳಿಸಿದ್ದರು.
6/ 9
ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿತ್ತು.
7/ 9
ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ, ಅವುಗಳನ್ನು 'ಹಾಟ್ ಶಾಟ್ಸ್' ಎಂಬ ಆ್ಯಪ್ ಮೂಲಕ ಪ್ರಕಟಿಸಿದ ಆರೋಪದಲ್ಲಿ ಬಂಧಿಸಲಾಗಿದೆ.
8/ 9
ರಿಯಾಲಿಟಿ ಶೋ ಜಡ್ಜ್ ಆಗಿರುವ ಶಿಲ್ಪಾ ಶೋನಲ್ಲಿ ಗಂಡು ಇಲ್ಲದಿದ್ದಾಗ ಹೆಂಗಸು ಹೆಚ್ಚು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದರು.
9/ 9
ಇನ್ನು ಶಿಲ್ಪಾ ಶೆಟ್ಟಿ ಸೋದರಿ ಶಮಿತಾ ಶೆಟ್ಟಿ OTTಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ನಲ್ಲಿ ಭಾಗವಹಿಸಿದ್ದಾರೆ.