ಗಣೇಶ್-ಶಿಲ್ಪಾ ಗಣೇಶ್ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಕಷ್ಟು ಪೋಸ್ಟ್ಗಳನ್ನು ಮಾಡುವ ಈ ಸ್ಟಾರ್ ದಂಪತಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿರುತ್ತಾರೆ. ಈಗಲೂ ಸಹ ತಪ್ಪನ್ನು ಒಪ್ಪಿಕೋ ಎಂದ ಗಂಡನಿಗೆ ಸಖತ್ ಫನ್ನಿಯಾಗಿ ಪ್ರತಿಕ್ರಿಯಿಸಿರುವ ಶಿಲ್ಪಾ ಎರಡು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶಿಲ್ಪಾ ಗಣೇಶ್ ಇನ್ಸ್ಟಾಗ್ರಾಂ ಖಾತೆ)
ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಕುರಿತು ತಮಾಷೆಯಾಗಿ ಪೋಸ್ಟ್ ಮಾಡುತ್ತಿರುತ್ತಾರೆ.
2/ 9
ಈ ಸ್ಟಾರ್ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಮಾಡುವ ತಮಾಷೆ ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ.
3/ 9
ಈಗಲೂ ಸಹ ಶಿಲ್ಪಾ ಪುಸ್ತಕ ಓದುವಾಗ ಗಣೇಶ್ ಅವರು ಕೊಡುತ್ತಿರುವ ಪ್ರತಿಕ್ರಿಯೆನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಅದಕ್ಕೆ ತಮಾಷೆಯಾಗಿ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಲಾಗಿದೆ.
4/ 9
ಹೌದು, ನನ್ನ ಗಂಡನ ತಲೆಯಲ್ಲಿ ಏನು ಓಡುತ್ತಿದೆ ಅಂತ ಗೊತ್ತು. ನನ್ನ ಪತ್ನಿ ಸೈಲೆಂಟ್ ಆಗಿ ಇದ್ದರೆ ಸಖತ್ ಕ್ಯೂಟ್ ಆಗಿ ಕಾಣುತ್ತಾಳೆ ಅಂತ ಗಣೇಶ್ ಅಂದುಕೊಳ್ಳುತ್ತಿರುತ್ತಾರೆ ಎಂದು ಈ ಚಿತ್ರ ಪೋಸ್ಟ್ ಮಾಡಿದ್ದಾರೆ ಶಿಲ್ಪಾ.
5/ 9
ಶಿಲ್ಪಾ ಅವರ ಹಾಸ್ಯ ಪ್ರಜ್ಞೆ ಕಂಡ ನೆಟ್ಟಿಗರು ಸಖತ್ ಕ್ರೇಜಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
6/ 9
ನಾನು ಮಾಡುವ ತಪ್ಪು ಒಪ್ಪಿಕೋ ಎಂದ ಗಂಡನಿಗೆ ಸೀದಾ ಅಪ್ಪಿಕೊಳ್ಳುವಂತಹ ಉತ್ತರ ಕೊಟ್ಟೆ ಎಂದಿದ್ದಾರೆ ಶಿಲ್ಪಾ.