ನಾನು ಚಿತ್ರದಲ್ಲಿ ಗರ್ಭಿಣಿ ಪಾತ್ರ ಮಾಡಿರುವುದು,ಅದರಲ್ಲೂ ಬಾಲಿವುಡ್ನಲ್ಲಿ ಮೊದಲ ಚಿತ್ರದಲ್ಲಿ ಈ ಪಾತ್ರ ಮಾಡಿರುವುದಕ್ಕೆ ಧೈರ್ಯಶಾಲಿ ಆಯ್ಕೆ ಎಂದು ಹಲವಾರು ಜನರು ಶ್ಲಾಘಿಸಿದ್ದಾರೆ ಎಂದು ಶಾಲಿನಿ ಹೇಳಿದ್ದಾರೆ. ಅಲ್ಲದೇ ಆ ಪಾತ್ರಕ್ಕೆ ಸರಿಹೊಂದುವ ದೇಹಾಕೃತಿ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಹಲವಾರು ಜನರು ಮೊದಲ ಚಿತ್ರದಲ್ಲಿ ಈ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.