Suhana Khan: ತನ್ನ ಮೈಬಣ್ಣದ ಬಗ್ಗೆ ಟೀಕೆ ಮಾಡಿದ ಟ್ರೋಲಿಗರಿಗೆ ಸಖತ್ ಪ್ರತಿಕ್ರಿಯೆ ನೀಡಿದ ಸುಹಾನಾ ಖಾನ್..!
End Coluorism: ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುವ ಸ್ಟಾರ್ ಕಿಡ್ಸ್ಗಳಲ್ಲಿ ಒಬ್ಬರು. ಇತ್ತೀಚೆಗೆ ಅವರ ಮೈ ಬಣ್ಣದ ಹಾಗೂ ನೋಡಲು ಸುಂದರವಾಗಿಲ್ಲ ಎಂದೆಲ್ಲ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಸುಹಾನಾ ಈ ಸಲ ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. (ಚಿತ್ರಗಳು ಕೃಪೆ: ಸುಹಾನಾ ಖಾನ್ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ಗೆ ಸದ್ಯದಲ್ಲೇ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿರುವ ಸ್ಟಾರ್ ಕಿಡ್ ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ.
2/ 12
ಈ ಹಿಂದೆ ಫೇರ್ ಆ್ಯಂಡ್ ಲೌವ್ಲಿಯಿಂದ ಫೇರ್ ಪದವನ್ನು ತೆಗೆದಾಗ ಖುಷಿಯಿಂದ ಸುಹಾನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
3/ 12
ಬೆಳ್ಳಗಿದ್ದರೆ ಮಾತ್ರ ಸುಂದರವಾಗಿರುವುದಲ್ಲ, ಮೈಬಣ್ಣ ಕಪ್ಪಗಿದ್ದರೂ ಸುಂದರವಾಗಿಯೇ ಇರುತ್ತಾರೆ ಎಂದಿದ್ದರು.
4/ 12
ಆದರೆ ಈಗ ಇದೇ ಸುಹಾನಾ ಖಾನ್ ಅವರ ಮೈಬಣ್ಣವನ್ನು ಟೀಕೆ ಮಾಡಿರುವ ಟ್ರೋಲಿಗರು ನೀನು ಕುರೂಪಿ ಎಂದೆಲ್ಲ ಟ್ರೋಲ್ ಮಾಡುತ್ತಿದ್ದಾರೆ.
5/ 12
ಟ್ರೋಲಿಗರು ತನ್ನನ್ನು ಟೀಕೆ ಮಾಡುತ್ತಿರುವ ಪೋಸ್ಟ್ಗಳನ್ನು ಸುಹಾನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6/ 12
ಹಿಂದಿ ಮಾತನಾಡಲು ಬರದವರಿಗೆ ಕಾಲಿ ಪದದ ಅರ್ಥವನ್ನು ಹಿಂದಿಯಲ್ಲಿ ಏನೆಂದು ಕರೆಯುತ್ತಾರೆಂದು ವಿವರವಾಗಿ ತಿಳಿಸಿದ್ದಾರೆ ಸುಹಾನಾ ಖಾನ್.
7/ 12
ಪ್ರಸ್ತುತ ಜಗತ್ತಿನಲ್ಲಿ ಸಾಕಷ್ಟು ವಿಷಯಗಳು ನಡೆಯುತ್ತಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ನನಗೆ 12 ವರ್ಷ ಇದ್ದಾಗಿನಿಂದ ನನಗೆ ನನ್ನ ಮೈಬಣ್ಣದಿಂದಾಗಿ ಚೆನ್ನಾಗಿ ಕಾಣುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.
8/ 12
ನಾವು ಭಾರತೀಯರು ಇರುವ ಬಣ್ಣವೇ ಬ್ರೌನ್. ಮೆಲನಿನ್ನಿಂದ ಎಷ್ಟೇ ದೂರ ಇರಲು ಪ್ರಯತ್ನಿಸಿದರೂ ಅದು ಆಗುವುದಿಲ್ಲ ಎಂದಿದ್ದಾರೆ ಸುಹಾನಾ.
9/ 12
ನಮ್ಮವರನ್ನೇ ನಾವು ದ್ವೇಷಿಸುತ್ತೇವೆ ಎಂದರೆ ಅದು ನಾವು ನೋವಿನಲ್ಲಿದ್ದೇವೆ ಎಂದು. ಭಾರತದಲ್ಲಿ ನೀವು ಕಪ್ಪಗಿದ್ದೀರಿ ಎಂದು ನಿಮ್ಮ ಕುಟುಂಬದವರೇ ನಿಮ್ಮನ್ನು ದೂರ ಇಟ್ಟಿದ್ದಾರೆಂದರೆ ಅದು ನೋವಿನ ಸಂಗತಿ ಎಂದಿದ್ದಾರೆ.
10/ 12
ನಿಮ್ಮ ಎತ್ತರ 5.7 ಇಲ್ಲ ಹಾಗೂ ಗೋಧಿ ಬಣ್ಣ ಇದ್ದಲ್ಲಿ ನೀವು ಸುಂದರವಾಗಿಲ್ಲವೆಂದಾ ಅರ್ಥ ಎಂದು ಪ್ರಶ್ನಿಸಿದ್ದಾರೆ ಸುಹಾನಾ.
11/ 12
ಹಾಗಾದರೆ ನಾನು 5.3 ಎತ್ತರವಿದ್ದು, ಗೋಧಿ ಬಣ್ಣವಿದ್ದೇನೆ. ಆದರೂ ನನಗೆ ನನ್ನ ಬಗ್ಗೆ ಖುಷಿ ಇದೆ ಎಂದು ಪ್ರತಿಕ್ರಿಯಸುವ ಮೂಲಕ ಸುಹಾನಾ ಖಾನ್ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
12/ 12
ಸುಹಾನಾ ಖಾನ್ ಸದ್ಯ ಬಾಲಿವುಡ್ ಎಂಟ್ರಿಗಾಗಿ ಕಾಯುತ್ತಿದ್ದಾರೆ.
First published:
112