ಡಿಗ್ರಿ ಓದುತ್ತಿದ್ದ ವೇಳೆ ನಟಿ ಡ್ರಾಮಾ ಕ್ಲಬ್ನಲ್ಲಿ ಭಾಗವಹಿಸಿದ್ದರು. ಸ್ಪರ್ಧಿಸಿ ರಸೆಲ್ ಕಪ್ ಪಡೆದರು. ಪದವಿ ಪಡೆದ ನಂತ್ರ, ಸುಹಾನಾ ಖಾನ್ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆ್ಯಕ್ಟಿಂಗ್ ಹಾಗೂ ಡ್ರಾಮಾ ಕೋರ್ಸ್ ಕೂಡ ಮಾಡಿದ್ದಾರೆ. ಇದೀಗ ಸುಹಾನಾ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜೋಯಾ ಅಖ್ತರ್ ಅವರ ಬಹು ನಿರೀಕ್ಷಿತ ಚಿತ್ರ 'ದಿ ಆರ್ಚೀಸ್' ಮೂಲಕ ಅವರು ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ.