ತಮ್ಮ ಫೇಸ್ಬುಕ್ ಖಾತೆಯಲ್ಲಿ ಚಿತ್ರದ ಫಸ್ಟ್ ಲುಕ್ ಶೇರ್ ಮಾಡಿಕೊಂಡಿರುವ ಕಿಂಗ್ ಖಾನ್, ಸುಹಾನಾ, ನೀನು ಎಂದಿಗೂ ಪರಿಪೂರ್ಣವಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಂಡಿರು. ಆದರೆ, ನೀನು ನೀನಾಗುವ ಮೂಲಕ ಪರಿಪೂರ್ಣವಾಗುವುದರತ್ತ ಹೆಜ್ಜೆ ಹಾಕಬಹುದು. ನಟಿಯಾಗಿ ನಿನ್ನಲ್ಲಿ ದಯೆ ಇರಲಿ. ಶಿಳ್ಳೆ ಚಪ್ಪಾಳೆಗಳು ನಿನಗೆ ಸೇರಿದಲ್ಲ. ಪರದೆ ಮೇಲಿನ ನಿನ್ನ ಪಾತ್ರದ ಭಾಗ ಮಾತ್ರ ನಿನಗೆ ಸೇರುತ್ತದೆ ಎಂಬುದನ್ನ ಮರೆಯಬೇಡ ಎಂದು ಮಗಳಿಗೆ ಸಲಹೆ ನೀಡಿದ್ದಾರೆ.