ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಸಿನಿಮಾ 'ಪಠಾಣ್' ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಅವರು ಭಾರೀ ಸುದ್ದಿ ಮಾಡುತ್ತಿದ್ದಾರೆ. ನಟನ ಬಟ್ಟೆ ಮತ್ತು ಲುಕ್ ನೋಡಿ ಅವರ ಅಭಿಮಾನಿಗಳು ಹೊಗಳುತ್ತಿದ್ದಾರೆ.
2/ 9
ಈಗ ಅವರ ವಾಚ್ ಇಂಟರ್ನೆಟ್ ಸೆನ್ಸೇಷನ್ ಆಗಿದೆ. ಶಾರುಖ್ ಅವರ ದುಬಾರಿ ವಾಚ್ ಬೆಲೆ ತಿಳಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅದರ ಫೋಟೋ ಈಗ ಇಂಟರ್ನೆಟ್ ತುಂಬಾ ಓಡಾಡುತ್ತಿದೆ.
3/ 9
ನಟನ ಲಕ್ಷುರಿ ಲೈಫ್ಸ್ಟೈಲ್ ಹಾಗೂ ದುಬಾರಿ ವಾಚ್ಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವರು ಇತ್ತೀಚೆಗೆ ಧರಿಸಿದ್ದ ವಾಚ್ ಸುದ್ದಿ ಮಾಡಿದೆ. ಶಾರುಖ್ ಇಂಟರ್ನ್ಯಾಶನಲ್ ಲೀಗ್ ಟಿ20 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ದುಬಾರಿ ವಾಚ್ ಧರಿಸಿದ್ದರು.
4/ 9
ಇವೆಂಟ್ನಲ್ಲಿ ಅವರು ಧರಿಸಿದ್ದ ವಾಚ್ ಜನರನ್ನು ಮೋಡಿ ಮಾಡಿತು. ಅದರ ಬೆಲೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದೆ. ಶಾರುಖ್ ಅವರ ವಾಚ್ ಮೌಲ್ಯ ರೂ. 4 ಕೋಟಿಯ 74 ಲಕ್ಷದ 47 ಸಾವಿರ ರೂ (4,74,47,000).
5/ 9
ಈ ವಾಚ್ ತುಂಬಾ ಸುಂದರವಾಗಿದೆ. ಅದರ ಬೆಲೆ ಕೇಳಿದ್ರೆ ನೀವು ತುಂಬಾ ಆಶ್ಚರ್ಯಪಡುತ್ತೀರಿ ಎನ್ನುವುದು ಸುಳ್ಳಲ್ಲ. ವಾಸ್ತವವಾಗಿ, ಬಾಲಿವುಡ್ನ 'ಬಾದ್ಶಾ' ಅಭಿಮಾನಿಯೊಬ್ಬ ನಟನ ವಿಶೇಷ ವಾಚ್ನ ಬೆಲೆಯನ್ನು ಹುಡುಕಿ ಟ್ವೀಟ್ ಮಾಡಿದ್ದಾರೆ. ಈ ವಾಚ್ ಆಡಮಾಸ್ ಪೀಗೆ ಬ್ರಾಂಡ್ನದ್ದಾಗಿದೆ.
6/ 9
ಇದರ ಮಾಡೆಲ್ ಅನ್ನು ರಾಯಲ್ ಓಕ್ ಪರ್ಚುವಲ್ ಕ್ಯಾಲೆಂಡರ್ ಎಂದು ಹೆಸರಿಸಲಾಗಿದೆ. ವಾಚ್ನ ಮಾರುಕಟ್ಟೆ ಮೌಲ್ಯ ಸುಮಾರು 4 ಕೋಟಿ 74 ಲಕ್ಷ 47 ಸಾವಿರ ರೂಪಾಯಿ.
7/ 9
ಶಾರುಖ್ ವಾಚ್ ಬೆಲೆ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದು, ಇದೀಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದರ 40ನೇ ಕಾಪಿಯನ್ನು ನಾನು 400 ರೂಪಾಯಿಗೆ ಖರೀದಿಸುತ್ತೇನೆ ಎಂದಿದ್ದಾರೆ ಒಬ್ಬರು.
8/ 9
ಇನ್ನೊಬ್ಬ ಬಳಕೆದಾರ, 'ಎಲ್ಲದರಲ್ಲೂ ಸಮಯವು ಒಂದೇ ರೀತಿ ಕಾಣುತ್ತದೆ, ವಿಶೇಷವೇನು?' ಎಂದು ಪ್ರಶ್ನಿಸಿದ್ದಾರೆ. ನಟನ ಅನೇಕ ಅಭಿಮಾನಿಗಳು ಶಾರುಖ್ ಅವರ ಸುಂದರವಾದ ವಾಚ್ ನೋಡಿ ಹೊಗಳಿದ್ದಾರೆ.
9/ 9
'ಪಠಾಣ್' ಜನವರಿ 25 ರಂದು ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಅದರ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.