ತಮ್ಮ ತಮ್ಮ ಸೆಲೆಬ್ರಿಟಿಗಳು ಪೈಪೋಟಿಯಲ್ಲಿ ಗೆಲ್ಲಬೇಕೆಂಬ ಉತ್ಸಾಹದಲ್ಲಿ ತಮ್ಮದೇ ನೆಚ್ಚಿನ ನಟರ ಇಮೇಜ್ ಅನ್ನು ಫ್ಯಾನ್ಸ್‌ಗಳು ಹಾಳು ಮಾಡುತ್ತಿದ್ದಾರೆ ಎಂಬ ಕಿಂಚಿತ್ ಯೋಚನೆ ಕೂಡ ಮಾಡುತ್ತಿಲ್ಲ ಎಂಬುದು ವಿಷಾದನೀಯ. ವಿರಾಟ್ ಕ್ರಿಕೆಟ್ ಜೀವನ, ಅವರು ಮಾಡಿದ ಸಾಧನೆಗಳು ಅವರನ್ನು ಪ್ರಶಂಸಿಸರುವ ಇತರ ಕ್ರೀಡಾಳುಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಫ್ಯಾನ್ಸ್‌ಗಳು ಗುದ್ದಾಡುತ್ತಿದ್ದರೆ ಇತ್ತ ಎಸ್‌ಆರ್‌ಕೆ ಫ್ಯಾನ್ಸ್ ಕೂಡ ನಮ್ಮ ನಟ ಯಾರಿಗೂ ಕಮ್ಮಿ ಇಲ್ಲ ಎಂಬ ಜೈಕಾರ ಹಾಕುತ್ತಿದ್ದಾರೆ.
ಶಾರುಖ್ ಖಾನ್ ಅವರ ಕೆಲವೊಂದು ಸಿನಿ ದೃಶ್ಯಗಳನ್ನು ಹೋಲಿಕೆ ಮಾಡಿರುವ ಎಸ್‌ಆರ್‌ಕೆ ಫ್ಯಾನ್ಸ್, ಇದು ವಿರಾಟ್ ವೃತ್ತಿಜೀವನದ ಸಾಧನೆಗಿಂತಲೂ ದೊಡ್ಡದು. ವಿರಾಟ್ ಶಾರುಖ್‌ರಷ್ಟು ಶ್ರೇಷ್ಟರಲ್ಲ ಖ್ಯಾತರಲ್ಲ ಎಂದು ಕಮೆಂಟ್ ಹಾಕಿದ್ದಾರೆ. ಇದಕ್ಕೆ ಸಮನಾಗಿ ವಿರಾಟ್ ಅಭಿಮಾನಿಗಳು ಕೂಡ ವಿರಾಟ್ ಸಾಧನೆಗಳನ್ನು ಬಣ್ಣಿಸಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದು, ಶಾರುಖ್ ವಿರಾಟ್‌ಗೆ ಸಮನಾಗಿರಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.