Shah Rukh Khan: ಪಠಾಣ್ ಸಿನಿಮಾಗೆ ಶಾರುಖ್ ಪಡೆದ ಸಂಭಾವನೆ ಎಷ್ಟು? ದೀಪಿಕಾ ಪಡುಕೋಣೆಗೂ ಕೊಟ್ಟಿದ್ದಾರೆ ಕೋಟಿ ಕೋಟಿ!
Shahrukh Khan: ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪಠಾಣ್ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ನೋಡಿದ ಸಿನಿಪ್ರೇಮಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾಗೆ ಶಾರುಖ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಅದ್ಧೂರಿ ಬಜೆಟ್ನಲ್ಲಿ ಪಠಾಣ್ ಸಿನಿಮಾ ನಿರ್ಮಾಣ ಮಾಡಲಾಗಿದೆ. 250 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ.
2/ 7
ಬಿಗ್ ಬಜೆಟ್ ಪಠಾಣ್ ಸಿನಿಮಾದಲ್ಲಿ ಶಾರುಖ್ ಮತ್ತು ಇತರ ಸ್ಟಾರ್ ಗಳು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಕುತೂಹಲ ಸಹ ಸಿನಿ ಪ್ರಿಯರಿಗಿದೆ. ಶಾರುಖ್ 4 ವರ್ಷಗಳ ಬಳಿಕ ತೆರೆ ಮೇಲೆ ಬರ್ತಿದ್ದು, 6 ಪ್ಯಾಕ್ಸ್ ಬಾಡಿಗಾಗಿ ಸಖತ್ ವರ್ಕ್ ಔಟ್ ಮಾಡಿದ್ದಾರೆ.
3/ 7
ಬಾಲಿವುಡ್ ಬಾದ್ ಷಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದು, ಪಠಾಣ್ ಚಿತ್ರಕ್ಕಾಗಿ ಅವ್ರು 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
4/ 7
ಪಠಾಣ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿರುವ ಜಾನ್ ಅಬ್ರಹಾಂ 20 ಕೋಟಿ ತೆಗೆದುಕೊಂಡಿದ್ದಾರೆ. ಶಾರುಖ್ ಖಾನ್ ಗೆ ಜೋಡಿಯಾಗಿ ಅಭಿನಯಿಸಿರುವ ನಟಿ ದೀಪಿಕಾ ಪಡುಕೋಣೆ ಕೂಡ 15 ಕೋಟಿ ಸಂಭಾವನೆ ಪಡೆದಿದ್ದಾರಂತೆ
5/ 7
ಪಠಾಣ್ ಸಿನಿಮಾಗೆ ವಿವಾದ ಭೂತ ಬೆನ್ನು ಬಿದ್ದಿದೆ. ಮತ್ತೊಂಡದೆ ಬಾಲಿವುಡ್ ಸಿನಿಮಾಗಳ ಬಹಿಷ್ಕಾರದ ಟ್ರೆಂಡ್ ಕೂಡ ಮುಂದುವರೆದಿದೆ. ಹೀಗಾಗಿ ಚಿತ್ರದ ನಿರ್ಮಾಪಕರಿಗೂ ಕೊಂಚ ಭಯ ಹುಟ್ಟಿಸಿದೆ.
6/ 7
ವರ್ಷದ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಚಿತ್ರ ಪಠಾಣ್ನಲ್ಲಿ ಆಕ್ಷನ್-ಥ್ರಿಲ್ಲರ್, ರೊಮ್ಯಾನ್ಸ್ಗೆ ಕೊರತೆಯಿಲ್ಲ. ಟ್ರೇಲರ್ ನೋಡಿದ ಸಿನಿಪ್ರೇಮಿಗಳು ಫುಲ್ ಖುಷ್ ಆಗಿದ್ದಾರೆ.
7/ 7
ಟಾಲಿವುಡ್ ಹೀರೋಗಳು ಪ್ಯಾನ್ ಇಂಡಿಯಾ ಹೀರೋಗಳಾಗಿ ಮಾರ್ಪಟ್ಟಿದ್ದಾರೆ. ಸಂಭಾವನೆ ವಿಷಯದಲ್ಲಿ ಇವ್ರು ಕೂಡ 100 ಕೋಟಿ ಗಡಿ ದಾಟಿದ್ದಾರೆ. ನಾಯಕರಾದ ಪ್ರಭಾಸ್, ಅಲ್ಲು ಅರ್ಜುನ್ ರೂ. 100 ಕೋಟಿಗೂ ಹೆಚ್ಚು ಹಣ ತೆಗೆದುಕೊಂಡಿದ್ದಾರೆ.