ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಐಷಾರಾಮಿ ಬದುಕು ಅನೇಕರಿಗೆ ಗೊತ್ತಿದೆ. ಅಪಾರ ಆಸ್ತಿ ಹೊಂದಿರುವ ಶಾರುಖ್ ದುಬೈನಲ್ಲೂ ಮನೆ ಮಾಡಿದ್ದಾರೆ. ಶಾರುಖ್ ಖಾನ್ ಓಡಾಡಲು ಪ್ರೈವೇಟ್ ಜೆಟ್ ಹೊಂದಿದ್ದಾರೆ.
2/ 7
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಬಳಿ ಕೂಡ ಪ್ರೈವೇಟ್ ಜೆಟ್ ಇದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಮಿತಾಬ್ ಬಚ್ಚನ್ ಅವರ ಬಳಿ ಇರುವ ಪ್ರೈವೇಟ್ ಜೆಟ್ 260 ಕೋಟಿ ಬೆಲೆ ಬಾಳುತ್ತದೆ.
3/ 7
ಪ್ರಿಯಾಂಕಾ ಚೋಪ್ರಾ ಬಾಲಿವುಡ್ನಿಂದ ಹಾಲಿವುಡ್ಗೆ ಹಾರಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ನೆಲೆಸಿರುವ ಪ್ರಿಯಾಂಕಾ ಹಲವೆಡೆ ಓಡಾಡುತ್ತಿರುತ್ತಾರೆ ಕೆಲವು ವರ್ಷಗಳ ಹಿಂದೆ, ಪ್ರಿಯಾಂಕಾ ತಮ್ಮ ಪ್ರಯಾಣದ ಅನುಕೂಲಕ್ಕಾಗಿ ಪ್ರೈವೇಟ್ ಜೆಟ್ ಖರೀದಿಸಿದ್ದಾರೆ.
4/ 7
ಪ್ರೈವೇಟ್ ಜೆಟ್ ಅನ್ನು ಹೊಂದಿರುವ ಮತ್ತೊಬ್ಬ ಬಾಲಿವುಡ್ ನಟ ಹೃತಿಕ್ ರೋಷನ್, ಪ್ರಯಾಣದ ಅನುಕೂಲಕ್ಕಾಗಿ ನಟ ಕೋಟಿಗಟ್ಟಲೆ ಖರ್ಚು ಮಾಡಿ ಖಾಸಗಿ ಜೆಟ್ ಖರೀದಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
5/ 7
ಬಾಲಿವುಡ್ ಮಾತ್ರವಲ್ಲದೆ ಸೌತ್ ಸಿನಿಮಾ ನಟರು ಕೂಡ ಅದ್ದೂರು ಜೀವನ ಸಾಗಿಸುತ್ತಿದ್ದು, ಖಾಸಗಿ ಜೆಟ್ ನಲ್ಲಿ ಪ್ರಯಾಣಿಸುತ್ತಾರೆ. ಮೆಗಾಸ್ಟಾರ್ ಚಿರಂಜೀವಿ ಬಳಿಯೂ ಪ್ರೈವೇಟ್ ಜೆಟ್ ಇದೆ
6/ 7
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪ್ರೈವೇಟ್ ಜೆಟ್ ಹೊಂದಿದ್ದಾರೆ. ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಪ್ರೈವೇಟ್ ಜೆಟ್ ಬಳಸುತ್ತಾರಂತೆ. ತಮ್ಮ ಹೊಸ ಚಿತ್ರ ಪುಷ್ಪಾ 2ನೇ ಚಿತ್ರಕ್ಕಾಗಿ ಅಲ್ಲು ಅರ್ಜುನ್ 175 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.
7/ 7
ತೆಲುಗು ನಟ ಜೂನಿಯರ್ ಎನ್ ಟಿ ಆರ್ 80 ಕೋಟಿ ಮೌಲ್ಯದ ಪ್ರೈವೇಟ್ ಜೆಟ್ ಹೊಂದಿದ್ದಾರೆ. ಭಾರತದಲ್ಲಿ ಲಂಬೋರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಅನ್ನು ಹೊಂದಿರುವ ಮೊದಲ ನಟ ಜೂನಿಯರ್ ಎನ್ಟಿಆರ್ ಎಂದು ವರದಿಗಳು ತಿಳಿಸಿವೆ.