ಬಾಲಿವುಡ್ನಲ್ಲಿ ಅನೇಕ ಸ್ಟಾರ್ಗಳು ಮುಂಬೈ ಮತ್ತು ವಿದೇಶದಲ್ಲಿ ಮನೆಗಳನ್ನು ಹೊಂದಿದ್ದಾರೆ. ಇನ್ನು ಕೆಲವರು ದುಬೈನಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅವರಲ್ಲಿ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅಷ್ಟೇ ಅಲ್ಲ ಅನೇಕ ಸೆಲೆಬ್ರಿಟಿಗಳು ದುಬಾರಿ ಮನೆ ಹೊಂದಿದ್ದಾರೆ.
2/ 8
ಸಿನಿಮಾ ಸ್ಟಾರ್ಸ್ಗಳು ಕೆಲವ ನಟನೆಗೆ ಮಾತ್ರವಲ್ಲ ಐಷಾರಾಮಿ ಜೀವನ ನಡೆಸೋದ್ರಲ್ಲಿಯೂ ಎಲ್ಲರ ಗಮನ ಸೆಳೆಯುತ್ತಾರೆ. ದುಬಾರಿ ಬ್ರಾಂಡ್ ಬಟ್ಟೆ, ಶೂಗಳಿಂದ ಹಿಡಿದು ದುಬಾರಿ ವಾಹನಗಳು, ಐಷಾರಾಮಿ ಬಂಗಲೆಗಳವರೆಗೆ ಸ್ಟಾರ್ಗಳ ಸುದ್ದಿ ಹರಿದಾಡುತ್ತಿರುತ್ತದೆ.
3/ 8
ವಿದೇಶಗಳಲ್ಲೂ ಬಾಲಿವುಡ್ ಸ್ಟಾರ್ಸ್ ಮನೆ, ಆಸ್ತಿ ಮಾಡಿದ್ದಾರೆ. ಶಾರುಖ್ ಖಾನ್, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಅನೇಕರು ದುಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದಾರೆ.
4/ 8
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೋಡಿ ಬಾಲಿವುಡ್ನ ಬೆಸ್ಟ್ ಜೋಡಿಯಾಗಿದೆ. ಅಭಿಷೇಕ್ ಮತ್ತು ಐಶ್ವರ್ಯಾ ದುಬೈನಲ್ಲಿ ತಮ್ಮದೇ ಮನೆಯನ್ನು ಹೊಂದಿದ್ದಾರೆ. ಅವರ ಈ ಐಷಾರಾಮಿ ಬಂಗಲೆ ಉತ್ತಮ ಜಾಗದಲ್ಲಿದೆ ಎಂದು ವರದಿಯಾಗಿದೆ.
5/ 8
ಶಾರುಖ್ ಖಾನ್ಗೆ ದುಬೈ ಅಚ್ಚುಮೆಚ್ಚು, ನಟ ಶಾರುಖ್ ಹೆಚ್ಚಾಗಿ ದುಬೈಗೆ ಹೋಗಿ ಬರ್ತಾರೆ. ದುಬೈಗ್ ಶಾರುಖ್ ಹೆಚ್ಚಾಗಿ ಭೇಟಿ ಕೊಡ್ತಾರೆ. ದುಬೈನಲ್ಲಿ ಶಾರುಖ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಶಾರುಖ್ ಖಾನ್ ದುಬೈನ ಕೆ ಫ್ರಾಂಡ್ ಆಫ್ ಪಾಮ್ ಜುಮೇರಾದಲ್ಲಿ ಐಷಾರಾಮಿ ವಿಲ್ಲಾ ಹೊಂದಿದ್ದಾರೆ.
6/ 8
ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ - ಟಿವಿ ಉದ್ಯಮದ ಅತ್ಯಂತ ಪ್ರೀತಿಯ ಜೋಡಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಇತ್ತೀಚೆಗೆ ದುಬೈನಲ್ಲಿ ತಮ್ಮ ಮನೆಯನ್ನು ಖರೀದಿಸಿದ್ದಾರೆ. ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ರು. ಅನೇಕರು ಇವರಿಗೆ ವಿಶ್ ಮಾಡಿದ್ರು.
7/ 8
ಅನಿಲ್ ಕಪೂರ್; ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ದುಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ರಿಟ್ಜ್ ಬೈ ಡ್ಯಾನ್ಯೂಬ್ ಹೌಸಿಂಗ್ ಪ್ರಾಜೆಕ್ಟ್ ನಲ್ಲಿ ಅನಿಲ್ ಕಪೂರ್ 2 ಬಿಎಚ್ಕೆ ಅಪಾರ್ಟ್ಮೆಂಟ್ ಹೊಂದಿದ್ದಾರೆ.
8/ 8
ಬಾಲಿವುಡ್ ನಟ ಸೊಹೈಲ್ ಖಾನ್ ಕೂಡ ದುಬೈನಲ್ಲಿ ಮನೆ ಹೊಂದಿದ್ದು, ದುಬೈಗೆ ಹೆಚ್ಚಾಗಿ ಹೋಗ್ತಾರೆ.