Shah Rukh Khan-Ram Charan: ಆಸ್ಕರ್ ಪ್ರಶಸ್ತಿಯನ್ನು ನನಗೂ ಮುಟ್ಟಲು ಕೊಡಿ! ರಾಮ್ ಚರಣ್ ಬಳಿ ಶಾರುಖ್ ಮನವಿ!
ಬಾಲಿವುಡ್ ನಲ್ಲಿ ಸೌತ್ ಸಿನಿಮಾಗಳು ಅಬ್ಬರಿಸಿದವು, ಇದೀಗ RRR ಸಿನಿಮಾ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ವೇಳೆ ಶಾರುಖ್ ಖಾನ್ ಹಾಗೂ ರಾಮ್ ಚರಣ್ ನಡುವೆ ನಡೆದ ಈ ಮಾತುಕತೆ ಇಡೀ ಚಿತ್ರರಂಗವನ್ನೇ ಅಶ್ಚರ್ಯ ಚಕಿತರನ್ನಾಗಿ ಮಾಡಿದೆ.
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಈ ಚಿತ್ರದ ಟ್ರೇಲರ್ ಬಗ್ಗೆ ರಾಮ್ ಚರಣ್ ಮೆಚ್ಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2/ 8
ರಾಮ್ ಚರಣ್ ಮೆಚ್ಚುಗೆಗೆ ನಟ ಶಾರುಖ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. RRR ಸಿನಿಮಾ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನೆಲೆ ಶಾರುಖ್ ಕೂಡ ಪ್ರತಿಕ್ರಿಯಿಸಿದ್ದಾರೆ.
3/ 8
ರಾಮ್ ಚರಣ್ ನಟನೆಯ RRR ಸಿನಿಮಾ ಆಸ್ಕರ್ ಪ್ರಶಸ್ತಿ ಪಡೆಯಲು ಪೈಪೋಟಿ ನೀಡಿದೆ. RRR ಈ ಚಿತ್ರಕ್ಕೆ ಆಸ್ಕರ್ ಒಲಿಯಲಿದೆ ಎಂದು ಶಾರುಖ್ ಖಾನ್ ಭರವಸೆ ನೀಡಿದ್ದಾರೆ.
4/ 8
RRR ಚಿತ್ರತಂಡ ಆಸ್ಕರ್ ಪ್ರಶಸ್ತಿಯನ್ನು ಭಾರತಕ್ಕೆ ತಂದಾಗ ನನಗೂ ಅದನ್ನು ಮುಟ್ಟಲು ಕೊಡಿ ಪ್ಲೀಸ್ ಎಂದು ಶಾರುಖ್ ಖಾನ್ ಮನವಿ ಮಾಡಿದ್ದಾರೆ.
5/ 8
ಶಾರುಖ್ ಖಾನ್ ಟ್ವೀಟ್ ಗೆ ರಾಮ್ ಚರಣ್ ಪ್ರತಿಕ್ರಿಯಿಸಿದ್ದು, ಖಂಡಿತವಾಗಿಯೂ ಶಾರುಖ್ ಸರ್, ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು ಎಂದು ಟ್ವೀಟ್ ಮಾಡಿದ್ದಾರೆ.
6/ 8
ಈ ನಟರಿಬ್ಬರ ನಡುವಿನ ಈ ಟ್ವಿಟರ್ ಮಾತುಕಥೆ ಇದೀಗ ಫುಲ್ ವೈರಲ್ ಆಗಿದೆ.
7/ 8
ಸೌತ್ ಸಿನಿಮಾ, ಬಾಲಿವುಡ್ ಸಿನಿಮಾ ಅಂತ ಏನು ಇಲ್ಲ ನಾವೆಲ್ಲಾ ಭಾರತೀಯ ಸಿನಿಮಾ ರಂಗದವರು ಎನ್ನುವುದನ್ನು ಈ ನಟರು ಈ ರೀತಿ ತೋರಿಸಿದ್ದು, ಅಭಿಮಾನಿಗಳು ಕೂಡ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
8/ 8
ಇಡೀ ಪಠಾಣ್ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ. ಹಿಂದೆಂದೂ ಕಾಣದ ರೀತಿಯಲ್ಲಿ ಶಾರುಖ್ ಖಾನ್ ಅವರನ್ನು ಸಾಹಸ ದೃಶ್ಯಗಳಲ್ಲಿ ನೋಡಲು ಕಾದಿದ್ದೇನೆ’ ಎಂದು ಟ್ವೀಟ್ ಮಾಡಿರುವ ರಾಮ್ ಚರಣ್ ಅವರು ‘ಪಠಾಣ್’ ಟ್ರೇಲರ್ ಹಂಚಿಕೊಂಡಿದ್ದಾರೆ.