ಕೆಜಿಎಫ್ ಸಿನಿಮಾಗಳ ಮೂಲಕ ಈಗ ಯಶ್ ಹೆಸರು ತಿಳಿಯದವರೇ ಇಲ್ಲ. ಸೌತ್ ಟು ನಾರ್ತ್ ರಾಕಿ ಭಾಯ್ ಹವಾ ಜೋರಾಗಿದೆ. ವಿಶ್ವಾದ್ಯಂತ ಸ್ಯಾಂಡಲ್ವುಡ್ ರಾಮಾಚಾರಿಗೆ ಫ್ಯಾನ್ಸ್ ಇದ್ದಾರೆ.
2/ 8
ಯಶ್ ಅವರ ಕೆಜಿಎಫ್ ಸೀಕ್ವೆಲ್ ಸಿನಿಮಾಗಳ ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲ. ಈ ಸಿನಿಮಾಗಳು ಮಾಡಿದ ಕಮಾಲ್ ಜಗತ್ತೇ ನೋಡಿದೆ. ಕೆಜಿಎಫ್ 2 ಸಿನಿಮಾ ಅದ್ಭುತ ಸೀಕ್ವೆಲ್ ಆಗಿ ಹೊರಹೊಮ್ಮಿತು.
3/ 8
ಈ ಸಿನಿಮಾವನ್ನು ಶಾರುಖ್ ಖಾನ್ ನೋಡಿದ್ದಾರಾ? ನೋಡಿದ್ದರೆ ಸಿನಿಮಾ ಬಗ್ಗೆ ಅವರ ಅಭಿಪ್ರಾಯವೇನು| ಯಶ್ ಅಭಿನಯ ನೋಡಿ ಕಿಂಗ್ ಖಾನ್ಗೆ ಏನನಿಸಿತು?
4/ 8
ಇದಕ್ಕೆಲ್ಲ ಅವರೇ ಉತ್ತರಿಸಿದ್ದಾರೆ. ಇತ್ತೀಚೆಗೆ ಆಸ್ಕ್ ಮಿ ಎನಿಥಿಂಗ್ ಸೆಷನ್ನಲ್ಲಿ ನೆಟ್ಟಿಗರೊಬ್ಬರು ಶಾರುಖ್ ಈ ಬಗ್ಗೆಯೇ ಪ್ರಶ್ನೆಯನ್ನು ಕೇಳಿದ್ದಾರೆ.
5/ 8
ಸರ್ ಕೆಜಿಎಫ್ 2 ಸಿನಿಮಾ ನೋಡಿದ್ರಾ? ಯಶ್ ಬಗ್ಗೆ ಒಂದು ಮಾತು ಹೇಳಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಶಾರುಖ್ ಅವರಿಗೆ ಟ್ವೀಟ್ ಮಾಡಿದ್ದಾರೆ.
6/ 8
ಇದಕ್ಕೆ ಉತ್ತರಿಸಿ ನಟ ಸಿನಿಮಾ ನೋಡಿದ್ರಾ ಇಲ್ವಾ ಎನ್ನುವುದನ್ನು ಸ್ಪಷ್ಟವಾಗಿ ಉತ್ತರಿಸಿಲ್ಲ. ಆದ್ರೆ ಯಶ್ ಈಸ್ ವಾವ್ ಎಂದು ಹೇಳಿದ್ದಾರೆ.
7/ 8
ಸದ್ಯ ನಟ ಶಾರುಖ್ ಅವರು ಅವರ ಬೇಷರಂ ಹಾಡಿನ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಪಠಾನ್ ಸಿನಿಮಾದ ಈ ಹಾಡು ಭಾರೀ ಟೀಕೆ ಎದುರಿಸುತ್ತಿದೆ.
8/ 8
ಇನ್ನು ಯಶ್ ಅವರ 19ನೇ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು ಯಶ್19 ಎನ್ನುವ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.