ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರು ಇತ್ತೀಚೆಗೆ ಟ್ವಿಟರ್ನಲ್ಲಿ ಆಸ್ಕ್ ಶಾರುಖ್ ಸೆಷನ್ ನಡೆಸಿದ್ದಾರೆ. ಈ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾರೆ ಪಠಾನ್ ನಟ.
2/ 8
ಅಭಿಮಾನಿಗಳ ಪ್ರಶ್ನೆಗೆ ಸಖತ್ತಾಗಿ ಉತ್ತರ ಕೊಡುವ ಶಾರುಖ್ ಅವರಲ್ಲಿ ಈ ಬಾರಿ ಅಭಿಮಾನಿಯೊಬ್ಬರು ಆಲಿಯಾ ಭಟ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
3/ 8
ಆಲಿಯಾ ಕೂಡಾ ಶಾರುಖ್ ಅವರ ಈ ಟ್ವಿಟರ್ ಸೆಷನ್ ಸೇರಿಕೊಂಡಿದ್ದಾರೆ. ಅವರು ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿ ಶಾರುಖ್ ಅವರಿಗೆ ಪ್ರಶ್ನೆ ಮಾಡಿ ಆಲಿಯಾ ನಿಮ್ಮನ್ನು ಕೇವಲ ಎಸ್ಆರ್ ಎಂದು ಏಕೆ ಕರೆಯುತ್ತಾರೆ? ಎಂದಿದ್ದಾರೆ.
4/ 8
ಅಭಿಮಾನಿ ಪ್ರಶ್ನೆಗೆ ಶಾರುಖ್ ಅವರ ಉತ್ತರ ಹಾಗೂ ಅದಕ್ಕೆ ಆಲಿಯಾ ಅವರ ಪ್ರತಿಕ್ರಿಯೆ ಇಬ್ಬರ ನಡುವಿನ ಬಂಧವನ್ನು ರಿವೀಲ್ ಮಾಡಿದೆ. ಶಾರುಖ್ ಅವರು ಆಲಿಯಾರನ್ನು ಲಿಟಲ್ ಅಮ್ಮ ಭಟ್ ಕಪೂರ್ ಎಂದು ಕರೆದಿದ್ದಾರೆ.
5/ 8
ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶಾರುಖ್ ಖಾನ್ಗೆ ಶಾರುಖ್ ಖಾನ್ ಎಂದು ಸಂಬೋಧಿಸುತ್ತಾರೆ. ಆದರೆ ಆಲಿಯಾ ಇತರ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳಿಗಿಂತ ಭಿನ್ನವಾಗಿ ಶಾರುಖ್ ಅವರನ್ನು ಕೇವಲ 'ಎಸ್ಆರ್' ಎಂದು ಏಕೆ ಕರೆಯುತ್ತಾರೆ ಎಂದು ಅಭಿಮಾನಿ ಪ್ರಶ್ನಿಸಿದ್ದಾರೆ.
6/ 8
ಇದಕ್ಕೆ ಪ್ರತಿಕ್ರಿಯಿಸಿದ ನಟ, 'ಎಸ್ಆರ್' ಎಂದರೆ ಏನು ಎಂದು ಟ್ವೀಟ್ ಮಾಡಿದ್ದಾರೆ. "ಸ್ವೀಟ್ ಮತ್ತು ರೋಮ್ಯಾಂಟಿಕ್ ಅಥವಾ ಬಹುಶಃ ಸೀನಿಯರ್ & ರೆಸ್ಪೆಕ್ಟೆಡ್ ಅಥವಾ ಶಾರುಖ್ ಆಗಿರಬಹುದೇನೋ ಎಂದಿದ್ದಾರೆ.
7/ 8
ಇದಕ್ಕೆ ಪ್ರತಿಕ್ರಿಯಿಸಿದ ಆಲಿಯಾ ಭಟ್, 'SR' ಎಂದರೇನು ಎಂಬುದನ್ನು ಬಹಿರಂಗಪಡಿಸಿದರು. ಟ್ವೀಟ್ ಮಾಡಿ, ಹೆಚ್ಚು ಸ್ವೀಟ್ ಮತ್ತು ರೆಸ್ಪೆಕ್ಟೆಡ್. ಆದರೆ ಜನವರಿ 25 ರಿಂದ ನಾನು ನಿಮ್ಮ ಹೆಸರು ಬದಲಾಯಿಸುತ್ತೇನೆ. ಪಠಾಣ್ ಎಂದು ಕರೆಯಲಿದ್ದೇನೆ. ನೋಡಿ ನಾನು ತುಂಬಾ ಕ್ರಿಯೇಟಿವ್ ಎಂದಿದ್ದಾರೆ.
8/ 8
ಆಲಿಯಾ ಭಟ್ ಹಾಗೂ ಶಾರುಖ್ ಖಾನ್ ಅವರ ಈ ಟ್ವೀಟ್ ಸಂಭಾಷಣೆ ನೆಟ್ಟಿಗರಿಗೆ ಇಷ್ಟವಾಗಿದೆ. ಆಲಿಯಾ ಅವರ ಹೊಸ ಹೆಸರು ವೈರಲ್ ಆಗಿದೆ.