ಶಾರುಖ್ ಖಾನ್ ಕುರಿತು ಯಾವುದೇ ಪರಿಚಯ ನೀಡುವ ಅಗತ್ಯವಿಲ್ಲ. ಅವರು ಲಕ್ಷಾಂತರ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಸೂಪರ್‌ಸ್ಟಾರ್ ನಾಲ್ಕು ವರ್ಷಗಳ ನಂತರ ಸ್ಪೈ-ಥ್ರಿಲ್ಲರ್ ಪಠಾನ್ ಸಿನಿಮಾ ಮೂಲಕ ಬಿಗ್ಸ್ಕ್ರೀನ್ಗೆ ಮರಳುತ್ತಿದ್ದಂತೆ ಪ್ರಪಂಚದಾದ್ಯಂತದ ಅವರ ಅಭಿಮಾನಿಗಳು ಚಿತ್ರಮಂದಿರಗಳತ್ತ ಬಂದಿದ್ದಾರೆ.
SRK Instagramನಲ್ಲಿ ಫಾಲೋ ಮಾಡುವ ಆರು ಜನರಲ್ಲಿ ಒಬ್ಬರು ಅವರ ಪತ್ನಿ ಗೌರಿ ಖಾನ್. ಈ ಜೋಡಿ ಹದಿಹರೆಯದವರಾಗಿದ್ದಾಗ ಮೊದಲು ಭೇಟಿಯಾದರು. ಶೀಘ್ರ ಡೇಟಿಂಗ್ ಪ್ರಾರಂಭಿಸಿದರು. ಎಸ್‌ಆರ್‌ಕೆ ಪೊಸೆಸಿವ್ ಬಾಯ್‌ಫ್ರೆಂಡ್ ಆಗಿದ್ದರು. ಗೌರಿ ನಟನಿಗೆ ಹೇಳದೆ ಮುಂಬೈಗೆ ಹೋದರು. ಗೌರಿಯ ಮೇಲಿನ ಪ್ರೀತಿಯಿಂದ ಶಾರುಖ್ ಕೂಡಾ ಮುಂಬೈಗೆ ಬಂದು ಬೀಚ್‌ಗಳಲ್ಲಿ ಪ್ರೇಯಸಿಯನ್ನು ಹುಡುಕತೊಡಗಿದರು.