ಶಾರುಖ್ ಖಾನ್ ಅವರು ಕೊಲ್ಕತ್ತಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವ್ಲ್ 2022ನಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ನಟ ಸೋಷಿಯಲ್ ಮೀಡಿಯಾದಲ್ಲಿ ತುಂಬಿರುವ ನೆಗೆಟಿವಿಟಿ ಬಗ್ಗೆ ಮಾತನಾಡಿದ್ದಾರೆ.
2/ 10
ಆದರೆ ಇಲ್ಲಿ ಶಾರುಖ್ ಮಾತನಾಡಿದ ಟಾಪಿಕ್ ಹಾಗೂ ಸದ್ಯದ ಪಠಾನ್ ಬಾಯ್ಕಾಟ್ ವಿಚಾರ ಸಿಂಕ್ ಆಗಿದೆ. ಪಠಾನ್ ಬಗ್ಗೆ ಒಂದೇ ಒಂದು ಮಾತನಾಡದೆಯೇ ನಟ ಟ್ವಿಟರ್ನಲ್ಲಿ ಟ್ರೆಂಡ್ ಆದ ಪಠಾನ್ ಬಾಯ್ಕಾಟ್ಗೆ ಕೌಂಟರ್ ಕೊಟ್ಟಿದ್ದಾರೆ. ಸಂಕುಚಿತ ಮನೋಭಾವದ ಬಗ್ಗೆ ಮಾತನಾಡಿದ ನಟ ನೆಗೆಟಿವ್ ಮೈಂಡ್ಸೆಟ್ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
3/ 10
ಅದ್ಧೂರಿ ಫಿಲ್ಮ್ಗ ಫೆಸ್ಟಿವಲ್ ಅನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಬಾಲಿವುಡ್ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಇಲ್ಲಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ರಾಣಿ ಮುಖರ್ಜಿ ಇದ್ದರು.
4/ 10
ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ಭಾಷಣದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ನೆಗೆಟಿವಿಟಿ ಬಗ್ಗೆ ನಟ ಮಾತನಾಡಿದ್ದಾರೆ. ನಮ್ಮ ಕಾಲದಲ್ಲಿ ಇಂದು ಸಾಮೂಹಿಕ ನಿರೂಪಣೆಗಳು ಸಾಮಾಜಿಕ ಮಾಧ್ಯಮದಿಂದ ರೂಪುಗೊಳ್ಳತ್ತಿವೆ. ಸಾಮಾಜಿಕ ಮಾಧ್ಯಮಗಳ ಹೆಚ್ಚುತ್ತಿರುವ ವ್ಯಾಪ್ತಿ ಸಿನಿಮಾದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದಿದ್ದಾರೆ.
5/ 10
ಆದರೆ ಸಿನಿಮಾವು ಈಗ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಸಾಮಾಜಿಕ ಮಾಧ್ಯಮವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತದೆ. ಅದು ಮಾನವ ಸ್ವಭಾವವನ್ನು, ಅದು ಎಲ್ಲಿದೆಯೂ ಅದೇ ಕೀಳು ಸ್ವಭಾವಕ್ಕೆ ಸೀಮಿತಗೊಳಿಸುತ್ತದೆ.
6/ 10
ನೆಗೆಟಿವಿಟಿ ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸಿದೆ. ಆ ಮೂಲಕ ಅದರ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುತ್ತದೆ. ಅಂತಹ ಟ್ರೆಂಡ್ ಸಮೂಹವನ್ನು ವಿಭಜಿಸುವ ಕೆಲಸ ಮಾಡಿ ವಿನಾಶಕಾರಿಯಾಗಿ ಬದಲಾಗುತ್ತದೆ.
7/ 10
ಸಿನಿಮಾ ಸೋಷಿಯಲ್ ಮೀಡಿಯಾದ ನೆಗೆಟಿವಿಟಿಗೆ ವಿರುದ್ಧವಾಗಿ ಕೌಂಟರ್ ಆಗಿ ಕೆಲಸ ಮಾಡುತ್ತದೆ. ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ ಹರಡುತ್ತದೆ. ಸಿನಿಮಾವು ಮಾನವ ಸ್ವಭಾವದ ದೌರ್ಬಲ್ಯಗಳನ್ನು ಸರಳ ರೂಪದಲ್ಲಿ ಹೇಳುತ್ತದೆ.
8/ 10
ಇದು ನಮಗೆ ನಮ್ಮನ್ನು ಪರಸ್ಪರ ಚೆನ್ನಾಗಿ ತಿಳಿದುಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಸಿನಿಮಾ ಮಾನವೀಯತೆಯ ಸಹಾನುಭೂತಿ, ಏಕತೆ ಮತ್ತು ಸಹೋದರತ್ವದ ಅಪಾರ ಸಾಮರ್ಥ್ಯವನ್ನು ಮುನ್ನೆಲೆಗೆ ತರುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
9/ 10
ಜಗತ್ತು ನಾರ್ಮಲ್ ಆಗಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಅತ್ಯಂತ ಖುಷಿಯಾಗಿದ್ದೇನೆ. ಜಗತ್ತು ಏನಾದರೂ ಮಾಡಲಿ ನಾನು, ನೀವು ಹಾಗೆಯೇ ಪಾಸಿಟಿವಿಟಿ ಇದ್ದವರೆಲ್ಲ ಈಗಲೂ ಬದುಕಿದ್ದೇವೆ ಎಂದಿದ್ದಾರೆ.
10/ 10
ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾನ್ ಒಂದು ಸ್ಪೈ ಥ್ರಿಲ್ಲರ್ ಆಗಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಎರಡು ದಿನಗಳ ಹಿಂದೆ ಅದರ ಮೊದಲ ಹಾಡು ಬೇಷರಂ ರಂಗ್ ಬಿಡುಗಡೆಯಾದ ನಂತರ ವಿವಾದ ಹುಟ್ಟಿಕೊಂಡಿದೆ.