ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪಠಾನ್ ಮೊದಲ ಹಾಡು ರಿಲೀಸ್ ಆದ ಕೂಡಲೇ ಭಾರೀ ವಿವಾದಕ್ಕೆ ಗುರಿಯಾಗಿದೆ. ನಟಿ ದೀಪಿಕಾ ಪಡುಕೋಣೆಯ ಬಿಕಿನಿ ವಿಚಾರವಂತೂ ದೊಡ್ಡ ಚರ್ಚೆಯಾಗಿದೆ.
2/ 7
ಇದೀಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಕೆಲವೊಂದು ನಿರ್ದಿಷ್ಟ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಚಿತ್ರತಂಡಕ್ಕೆ ಸೂಚನೆ ಕೊಟ್ಟಿದೆ. ಇನ್ನು ಶಾರುಖ್ ಅವರೇ ಖುದ್ದಾಗಿ ಕೆಲವು ಸೀನ್ ಕಟ್ ಮಾಡಲು ಹೇಳಿದ್ದಾರೆ ಎನ್ನಲಾಗಿದೆ.
3/ 7
ಅಚ್ಚರಿಯ ಬೆಳವಣಿಗೆ ಏನೆಂದರೆ ಈ ಸಿನಿಮಾದಲ್ಲಿ ದೀಪಿಕಾ ಅವರ ಆರೆಂಜ್ ಬಿಕಿನಿ ಸೀನ್ಗೆ ಸಮಸ್ಯೆಯಾಗುವುದಿಲ್ಲ. ಈ ದೃಶ್ಯ ಹಾಗೆಯೇ ಇರಲಿದೆಯಂತೆ.
4/ 7
ಹಾಡಿನಲ್ಲಿರುವ ಕೆಲವು ಸೀನ್ಗಳು ಸೇರಿದಂತೆ ಸಿನಿಮಾದ ಒಟ್ಟು 10 ಸೀನ್ಗೆ ಕತ್ತರಿ ಬಿದ್ದಿದೆ. ಬಹಳಷ್ಟು ಡೈಲಾಗ್ಗಳನ್ನು ಕೂಡಾ ಬದಲಾಯಿಸಲಾಗಿದೆ ಎನ್ನಲಾಗಿದೆ.
5/ 7
ಹಾಡು ಹಾಗೂ ಹಾಡಿನಲ್ಲಿ ಧರಿಸಲಾಗಿದ್ದ ಔಟ್ಫಿಟ್ ಬದಲಾಯಿಸಲಾಗುವುದಿಲ್ಲ. ಕೆಲವೊಂದು ಶಾಟ್ ಬದಲಾಯಿಸಲು ಹೇಳಿದ್ದರೂ ದೀಪಿಕಾ ಧರಿಸಿದ್ದ ಕೇಸರಿ ಬಿಕಿನಿಯನ್ನು ಸಿಬಿಎಫ್ಸಿ ಪಾಸ್ ಮಾಡಿದೆ.
6/ 7
ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿರುವ ಸಿನಿಮಾ ಪಠಾನ್ ಮೂಲಕ ಶಾರುಖ್ ಖಾನ್ 4 ವರ್ಷಗಳ ನಂತರ ಕಂ ಬ್ಯಾಕ್ ಮಾಡುತ್ತಿದ್ದಾರೆ.
7/ 7
ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ ಕೂಡಾ ನಟಿಸುತ್ತಿದ್ದು ಸಿನಿಮಾ ಜನವರಿ 25ರಂದು ರಿಲೀಸ್ ಆಗುತ್ತಿದೆ.