ಪಠಾಣ್ ಸಿನಿಮಾ ಮೊದಲ ಶೋ ಬೆಳಗ್ಗೆ 6 ಗಂಟೆಗೆ ಶುರುವಾಗಿದೆ. ಚಿತ್ರದ ಅದ್ಧೂರಿ ಬಿಡುಗಡೆಯನ್ನು ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಹೊರತುಪಡಿಸಿ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 'ಪಠಾಣ್' ಗೆ ಸಂಬಂಧಿಸಿದ 5 ವಿಷಯಗಳ ಬಗ್ಗೆ ತಿಳಿಯಿರಿ, ಇದು ಇತರ ಹಿಂದಿ ಸಿನಿಮಾಗಳಿಗಿಂತ ಭಿನ್ನವಾಗಿದೆ.
'ಪಠಾಣ್' ಚಿತ್ರದ ಟ್ರೈಲರ್ ನೋಡಿದ್ರೆ ತಿಳಿಯುತ್ತೆ ಇದು ಇತರ ಬಾಲಿವುಡ್ ಚಿತ್ರಗಳಿಗಿಂತ ಭಿನ್ನವಾಗಿದೆ ಎಂದು. 'ಪಠಾಣ್'ನ ಆಕ್ಷನ್ IMAX ಫಾರ್ ಮ್ಯಾಟ್ನಲ್ಲಿ ಕಾಣಿಬಹುದಾಗಿದೆ. ಇಲ್ಲಿಯವರೆಗೆ ಯಾವುದೇ ಭಾರತೀಯ ಚಲನಚಿತ್ರವನ್ನು ಐಮ್ಯಾಕ್ಸ್ ರೂಪದಲ್ಲಿ ನಿರ್ಮಿಸಲಾಗಿಲ್ಲ. 57 ವರ್ಷದ ಶಾರುಖ್ ಖಾನ್ ಮತ್ತು 50 ವರ್ಷದ ಜಾನ್ ಅಬ್ರಹಾಂ ಇಬ್ಬರೂ ಮೈಜುಮ್ ಎನಿಸುವ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಭಯೋತ್ಪಾದಕರ ಮೇಲೆ ತಯಾರಾದ ಹಿಂದಿ ಚಿತ್ರಗಳಲ್ಲಿ ಖಳನಾಯಕರನ್ನು ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದವರು ಎಂದು ತೋರಿಸಲಾಗಿತ್ತು. ಆದರೆ ಪಠಾಣ್ ಸಿನಿಮಾದಲ್ಲಿ ಮಾನವೀಯತೆ, ಭಯೋತ್ಪಾದನೆ ಅಪರಾಧಿಗಳೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ ಎಂಬುದನ್ನು ತೋರಿಸಲಾಗಿದೆ ಎಂದು ವರದಿಯಾಗಿದೆ. ಸುಮಾರು 250 ಕೋಟಿ ವೆಚ್ಚದಲ್ಲಿ ತಯಾರಾದ ಪಠಾಣ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.