Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

Pathaan Collections: ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ರಿಲೀಸ್ ಆದಾಗಿನಿಂದಲೂ ಭರ್ಜರಿಯಾಗಿ ಓಡುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೀಗ ಈ ಸಿನಿಮಾ 1000 ಕೋಟಿಯ ಗಡಿ ಸಮೀಪಿಸಿದೆ.

First published:

  • 17

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    ಶಾರುಖ್ ಖಾನ್ ಅವರಿಗೆ ದಕ್ಷಿಣದಲ್ಲಿಯೂ ಅಭಿಮಾನಿಗಳಿದ್ದಾರೆ. ಆದರೂ ಕಳೆದ ಕೆಲವು ವರ್ಷಗಳಿಂದ ಶಾರುಖ್ ಖಾನ್ ಅವರ ಟ್ರ್ಯಾಕ್ ರೆಕಾರ್ಡ್ ಡೌನ್ ಆಗಿತ್ತು. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾ ಕೊಟ್ಟ ನಟ ಈಗ ಪಠಾಣ್ ಮೂಲಕ ಅಬ್ಬರಿಸುತ್ತಿದ್ದಾರೆ.

    MORE
    GALLERIES

  • 27

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    ಶಾರುಖ್ ಅಭಿನಯದ ಆಕ್ಷನ್ ಥ್ರಿಲ್ಲರ್ ಪಠಾನ್. ಸಿನಿಮಾ ಜನವರಿ 25 ರಂದು ವಿಶ್ವದಾದ್ಯಂತ 7700 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಭಾರತದಲ್ಲಿ 5200, ವಿದೇಶದಲ್ಲಿ 2500 ಸ್ಕ್ರೀನ್​ನಲ್ಲಿ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಹಿಂದಿ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

    MORE
    GALLERIES

  • 37

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    ಈ ಸಿನಿಮಾದ ಕಲೆಕ್ಷನ್ಸ್ ವಿಚಾರಕ್ಕೆ ಬಂದರೆ ಪಠಾಣ್ ಅಮೆರಿಕಾದಲ್ಲಿ ಬಾಹುಬಲಿ 2 ಕಲೆಕ್ಷನ್ಸ್ ಬ್ರೇಕ್ ಮಾಡಿದೆ. RRR US ನಲ್ಲಿ 14.3 ಮಿಲಿಯನ್ ಡಾಲರ್ ಗಳಿಸಿದೆ. ಪಠಾಣ್ ಇತ್ತೀಚೆಗೆ $15 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸುವ ಮೂಲಕ RRR ನ ದಾಖಲೆ ಬ್ರೇಕ್ ಮಾಡಿದೆ.

    MORE
    GALLERIES

  • 47

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    14 ದಿನಗಳಲ್ಲಿ ವಿಶ್ವಾದ್ಯಂತ 865 ಕೋಟಿ ಗಳಿಕೆ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿದೆ. ಅಂದರೆ ಅಮೆರಿಕನ್ ಡಾಲರ್ ನಲ್ಲಿ 105.51 ಮಿಲಿಯನ್ ಡಾಲರ್. ಸಿನಿಮಾ ವಿದೇಶದಲ್ಲಿ 329 ಕೋಟಿ ಗಳಿಸಿತು. ಭಾರತದಲ್ಲಿ 536 ಕೋಟಿ ಗಳಿಸಿತು.

    MORE
    GALLERIES

  • 57

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    ನಿರೀಕ್ಷೆಗೂ ಮೀರಿದ ರೇಂಜ್ ನಲ್ಲಿ ಬಾಕ್ಸ್ ಆಫೀಸ್ ಅಬ್ಬರಿಸುತ್ತಿರುವ ಪಠಾಣ್ ನ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ಸ್ಟ್ರೀಮಿಂಗ್ ಆಪ್ Amazon Prime Video ಪಡೆದುಕೊಂಡಿದೆ ಎನ್ನಲಾಗಿದೆ.

    MORE
    GALLERIES

  • 67

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    ಚಿತ್ರದ ಡಿಜಿಟಲ್ ಹಕ್ಕುಗಳನ್ನು ಸಂಸ್ಥೆಯು ಭಾರೀ ಬೆಲೆ ಕೊಟ್ಟು ಪಡೆದುಕೊಂಡಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 100 ಕೋಟಿ ಬೆಲೆಗೆ ಪಠಾಣ್ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸಿದೆ.

    MORE
    GALLERIES

  • 77

    Pathaan Collections: 1000 ಕೋಟಿಯತ್ತ ಪಠಾಣ್ ದಾಪುಗಾಲು! ಬಾಲಿವುಡ್​ನ ಬಿಗ್ ಸಕ್ಸಸ್

    ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಏಪ್ರಿಲ್ 25 ರಂದು ಪ್ರಸಾರ ಮಾಡಲು ಬಯಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

    MORE
    GALLERIES