ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಅವರ ಮಗಳು ಸುಹಾನಾ ಖಾನ್ (Suhana Khan) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರ್ತಾರೆ. ಇವರು ನಿನ್ನೆ ರಾತ್ರಿ ಹಂಚಿಕೊಂಡಿರುವ ಚಿತ್ರ ಸದ್ಯ ವೈರಲ್ ಆಗುತ್ತಿದೆ. ಹೌದು, ಸಹೋದರ ಆರ್ಯನ್ ಖಾನ್
(Aryan Khan) ಜತೆಗಿನ ಫೋಟೋವನ್ನು ಸುಹಾನಾ ಶೇರ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸುಹಾನಾ ಖಾನ್ ಇನ್ಸ್ಟಾಗ್ರಾಂ ಖಾತೆ)
ವಿದೇಶದಲ್ಲಿ ಸಿನಿಮಾ ಕುರಿತಾದ ಕೋರ್ಸ್ ಮಾಡುತ್ತಿರುವ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಅವರು ನಿನ್ನೆ ಸಂಜೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಸಹೋದರ ಆರ್ಯನ್ ಖಾನ್ ಜತೆಗಿನ ಒಂದು ಫೋಟೋ ಶೇರ್ ಮಾಡಿದ್ದಾರೆ.
2/ 5
ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ತಮ್ಮ ಅಪ್ಪನ ಜತೆಗಿರುವ ಹಳೇ ಫೋಟೋವನ್ನು ಸುಹಾನಾ ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಲ್ಯದಲ್ಲಿ ಆರ್ಯನ್ ಹಾಗೂ ಸುಹಾನಾ ಅಪ್ಪನ ಜತೆ ಸಖತ್ ಕ್ರೇಜಿಯಾಗಿ ಪೋಸ್ ಕೊಟ್ಟಿದ್ದಾರೆ.
3/ 5
ಆರ್ಯನ್ ಖಾನ್ ಮನೆಗೆ ಮರಳಲಿರುವ ಖುಷಿಯಲ್ಲಿ ಸುಹಾನಾ ಖಾನ್ ಈ ಚಿತ್ರವನ್ನು ಶೇರ್ ಮಾಡಿದ್ದು, ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಸುಹಾನಾ ಮಾಡಿರುವ ಈ ಪೋಸ್ಟ್ಗೆ ಶನಾಯಾ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
4/ 5
ಮಾದಕ ವಸ್ತು ಪ್ರಕರಣದಲ್ಲಿ ಆರ್ಯನ್ ಖಾನ್ ಅವರಿಗೆ ಜಾಮೀನು ಮಂಜೂರಾಗಿದ್ದು, ಶಾರುಖ್ ಖಾನ್, ಗೌರಿ ಖಾನ್ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
5/ 5
ಸುಹಾನಾ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಹೋದರರಾದ ಅಬ್ರಂ ಖಾನ್ ಹಾಗೂ ಆರ್ಯನ್ ಖಾನ್ ಜತೆಗಿನ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ತಮ್ಮ ವಿದೇಶಿ ಸ್ನೇಹಿತರ ಜತೆಗಿನ ಚಿತ್ರಗಳಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.