Natu Natu-Shah Rukh Khan: ಬೆಳಗ್ಗೆ ಎದ್ದ ಕೂಡಲೇ ನಾಟು ನಾಟು ಹಾಡಿಗೆ ಶಾರುಖ್ ಸಖತ್ ಡ್ಯಾನ್ಸ್
ಗೋಲ್ಡನ್ ಗ್ಲೋಬ್ಸ್ ಅವಾರ್ಡ್ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಮುಡಿಗೇರಿಸಿಕೊಂಡ ನಾಟು ನಾಟು ಹಾಡಿಗೆ ಶಾರುಖ್ ಬೆಳ್ಳಂಬೆಳಗ್ಗೆ ಉದ್ದು ಖುಷಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
2/ 7
ಇದೀಗ ನಟ ಶಾರುಖ್ ಖಾನ್ ಅವರೂ ಈ ಖುಷಿಯಲ್ಲಿ ಭಾಗಿಯಾಗಿದ್ದಾರೆ. ನಟ ಭಾರತೀಯ ಸಿನಿಮಾದ ಹಾಡು ಅವಾರ್ಡ್ ಗೆದ್ದಿರುವುದನ್ನು ತಿಳಿದು ಖುಷಿ ವ್ಯಕ್ತಪಡಿಸಿದ್ದಾರೆ.
3/ 7
ಇದೀಗ ನಟ ಶಾರುಖ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ನಾಟು ನಾಟು ಸಕ್ಸಸ್ ಖುಷಿಯಲ್ಲಿ ಕಿಂಗ್ ಖಾನ್ ಭಾಗಿಯಾಗಿದ್ದಾರೆ.
4/ 7
ಸರ್ ಈಗಷ್ಟೇ ಎದ್ದು ಡ್ಯಾನ್ಸ್ ಮಾಡುತ್ತಿದ್ದೇನೆ. ಗೋಲ್ಡನ್ ಗ್ಲೋಬ್ಸ್ನಲ್ಲಿ ನಿಮ್ಮ ಗೆಲುವನ್ನು ಸಂಭ್ರಮಿಸುತ್ತಿದ್ದೇವೆ. ಇನ್ನಷ್ಟು ಅವಾರ್ಡ್ ಭಾರತ ಹೆಮ್ಮೆ ಪಡುವಂತೆ ಮಾಡುತ್ತಿದೆ ಎಂದು ಬರೆದಿದ್ದಾರೆ.
5/ 7
ಇತ್ತೀಚೆಗೆ ರಾಮ್ ಚರಣ್ ಹಾಗೂ ಶಾರುಖ್ ನಡುವೆ ಇಂಟ್ರೆಸ್ಟಿಂಗ್ ಟ್ವಿಟರ್ ಚಾಟ್ ನಡೆದಿತ್ತು. ಇದರಲ್ಲಿ ರಾಮ್ ಚರಣ್ ಶಾರುಖ್ ಅವರ ಪಠಾನ್ ಸಿನಿಮಾಗೆ ಶುಭ ಹಾರೈಸಿದ್ದರು.
6/ 7
ಪ್ರತಿಯಾಗಿ ಉತ್ತರಿಸಿದ ಶಾರುಖ್ ಅವರು ನಿಮಗ ಆಸ್ಕರ್ ಬಂದಾಗ ನನಗೂ ಒಮ್ಮೆ ಮುಟ್ಟಲು ಕೊಡಬೇಕು ಎಂದು ಕೇಳಿದ್ದು ನೆಟ್ಟಿಗರು ಈ ಸಂಭಾಷಣೆಯನ್ನೂ ಎಂಜಾಯ್ ಮಾಡಿದ್ದಾರೆ.
7/ 7
ನಟ ಶಾರುಖ್ ಅವರು ತಮ್ಮ ಮುಂಬರುವ ಸಿನಿಮಾ ಪಠಾನ್ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಾರೆ.