Shah Rukh Khan-Pathaan: ಸರ್, ಹನಿಮೂನ್ಗೆ ಹೋಗ್ಲಾ? ಪಠಾಣ್ ಸಿನಿಮಾ ನೋಡ್ಲಾ? ಅಭಿಮಾನಿ ಪ್ರಶ್ನೆಗೆ ಶಾರುಖ್ ಕೊಟ್ರು ಸಖತ್ ಉತ್ತರ!
ಜನವರಿ 25ರಂದು ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗ್ತಿದ್ದು, ಟಿಕೆಟ್ ಗಳೆಲ್ಲಾ ಸೋಲ್ಡ್ ಔಟ್ ಆಗಿದೆ. ಎಸ್ಆರ್ಕೆ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಟ್ವಿಟರ್ನಲ್ಲಿ ನವವಿವಾಹಿತ ಕೇಳಿದ ಪ್ರಶ್ನೆಗೆ ಶಾರುಖ್ ಏನ್ ಹೇಳಿದ್ದಾರೆ.
ಶಾರುಖ್ ಪಠಾಣ್ ಪ್ರಚಾರದಲ್ಲ ಬ್ಯುಸಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. SRK ಸೆಷನ್ ಕೂಡ ಭರ್ಜರಿಯಾಗಿ ನಡೀತಿದೆ. ಅಭಿಮಾನಿಗಳು ಕೇಳೋ ಪ್ರಶ್ನೆಗೆ ಬಹಳ ಕೂಲ್ ಆಗಿಯೇ ಉತ್ತರ ಕೊಡ್ತಿದ್ದಾರೆ.
2/ 8
ನವವಿವಾಹಿತನೊಬ್ಬ ಶಾರುಖ್ ಖಾನ್ ಬಳಿ ಫನ್ನಿ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ಬಾಲಿವುಡ್ ಬಾದ್ ಷಾ ಕೂಡ ತಮಾಷೆಯಾಗಿಯೇ ಉತ್ತರ ನೀಡಿದ್ದಾರೆ.
3/ 8
ಅಭಿಮಾನಿಯೊಬ್ಬರು ಟ್ವೀಟ್ ಮಾಡಿ, ಸರ್ ನನಗೆ ಮದುವೆಯಾಗಿ ಒಂದು ವಾರವಾಗಿದೆ. ನಾವು ಹನಿಮೂನ್ ಹೋಗೋದಾ ಅಥವಾ ಪಠಾಣ್ ಸಿನಿಮಾ ನೋಡೋದಾ? ಎಂದು ಪ್ರಶ್ನೆ ಮಾಡಿದ್ದಾನೆ.
4/ 8
ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಶಾರುಖ್, 'ಮಗನೇ ಮದುವೆಯಾಗಿ ಒಂದು ವಾರ ಕಳೆದಿದೆ ಆದ್ರೆ ನೀನು ಇನ್ನೂ ಹನಿಮೂನ್ಗೆ ಹೋಗಿಲ್ಲ. ಈಗ ನಿನ್ನ ಹೆಂಡತಿಯೊಂದಿಗೆ ಪಠಾಣ್ನನ್ನು ನೋಡಿ ನಂತರ ಹನಿಮೂನ್ಗೆ ಹೋಗಿ ಎಂದು ಸಖತ್ ಆಗಿಯೇ ಉತ್ತರ ನೀಡಿದ್ದಾರೆ.
5/ 8
ಶಾರುಖ್ ಅಭಿಮಾನಿ ನಡುವಿನ ಟ್ವೀಟ್ ಇದೀಗ ಸಖತ್ ವೈರಲ್ ಆಗಿದ್ದು, ಶಾರುಖ್ ಟ್ವೀಟ್ ನೋಡಿದ ನೆಟ್ಟಿಗರು ನಕ್ಕು ಪೋಸ್ಟ್ ನನ್ನು ಅನೇಕರು ಶೇರ್ ಮಾಡ್ತಿದ್ದಾರೆ.
6/ 8
ಪಠಾಣ್ ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಬಿಡುಗಡೆ ಮುನ್ನವೇ ಪಠಾಣ್ ಹೌಸ್ ಟಿಕೆಟ್ ಸೋಲ್ಡ್ಔಟ್ ಆಗಿದೆ.
7/ 8
ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಅದಕ್ಕೆ ಬೆಳಗ್ಗೆ 6 ಗಂಟೆಯಿಂದ ಶೋಗಳು ಶುರುವಾಗಲಿವೆ.
8/ 8
ಹಲವೆಡೆ ಪಠಾಣ್ ಸಿನಿಮಾದ 1 ಟಿಕೆಟ್ 2400 ರೂ.ಗೆ ಮಾರಾಟವಾಗಿದೆ. ಪಠಾಣ್ಗೆ ಪೈಪೋಟಿ ನೀಡಲು ಗಾಂಧಿ ಗೋಡ್ಸೆ ಏಕ್ ಯುದ್ಧ್ ಜನವರಿ 26 ರಂದು ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ. ಯಾವ ಸಿನಿಮಾ ಗೆಲ್ಲುತ್ತೆ ಅಂತ ಕಾದು ನೋಡಬೇಕಿದೆ.