Allu Arha: ಶಾಕುಂತಲಂ ಸಿನಿಮಾ ಶೂಟಿಂಗ್ ಮುಗಿಸಿದ ಅಲ್ಲು ಅರ್ಹಾ: ಚಿತ್ರತಂಡದ ಕಡೆಯಿಂದ ಸಿಕ್ತು ಸಖತ್ ಪಾರ್ಟಿ..!
ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಇದೇ ಮೊದಲ ಸಲ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ಅಲ್ಲು ಅರ್ಹಾ ರಾಜಕುಮಾರನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೆ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. (ಚಿತ್ರಗಳು ಕೃಪೆ: Instagram)
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹೀಗಿರುವಾಗಲೇ ಈ ಸ್ಟಾರ್ ಕಿಡ್ಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿದೆ
2/ 8
ಸ್ಟೈಲಿಶ್ ಪ್ರಿನ್ಸೆಸ್ ಈಗ ಸಮಂತಾ ಅಕ್ಕಿನೇನಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.
3/ 8
ಶಾಕುಂತಲಂ ಸಿನಿಮಾದಲ್ಲಿ ಅಲ್ಲು ಅರ್ಹಾ ರಾಜಕುಮಾರ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
4/ 8
ಇತ್ತೀಚೆಗಷ್ಟೆ ಈ ಸಿನಿಮಾದಲ್ಲಿ ತನ್ನ ಪಾಲಿನ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಅಲ್ಲು ಅರ್ಹಾ.
5/ 8
ಅಲ್ಲು ಅರ್ಹಾ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಶಾಕುಂತಲಂ ಚಿತ್ರತಂಡ ಪುಟ್ಟ ಪಾರ್ಟಿ ಕೊಟ್ಟಿದೆ.
6/ 8
ಅಲ್ಲು ಅರ್ಹಾ ಶೂಟಿಂಗ್ ಮುಗಿಸಿದ್ದಕ್ಕೆ ಧನ್ಯವಾದ ತಿಳಿಸಿ, ಕೇಕ್ ತಂದು ಅವರ ಕೈಯಲ್ಲೇ ಕತ್ತರಿಸಿದ್ದಾರೆ.
7/ 8
ಜೊತೆಗೆ ಅಲ್ಲು ಅರ್ಹಾಗೆ ಸಖತ್ ಕ್ಯೂಟ್ ಗಿಫ್ಟ್ ಸಹ ಕೊಟ್ಟಿದ್ದಾರೆ.
8/ 8
ಇನ್ನು ಮಗಳ ಚಿತ್ರೀಕರಣದ ಸೆಟ್ಗೆ ಅಪ್ಪ ಅಲ್ಲು ಅರ್ಜುನ್ ಸಹ ಈ ಹಿಂದೆ ಭೇಟಿ ಕೊಟ್ಟಿದ್ದರು.