Rashmi Prabhakar: ಲಕ್ಷ್ಮೀ ಬಾರಮ್ಮ', 'ಶುಭವಿವಾಹ' , 'ಜೀವನಚೈತ್ರ' , 'ಮನಸೆಲ್ಲಾ ನೀನೇ', 'ಮಹಾಭಾರತ', 'ದರ್ಪಣ', ತಮಿಳಿನ 'ಅರುಂಧತಿ', ತೆಲುಗಿನ 'ಪೌರ್ಣಮಿ', 'ಕಾವ್ಯಾಂಜಲಿ' ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್ ಕಳೆದ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಪತಿಯ ಜೊತೆ ಮಾಲ್ಡೀವ್ಸ್ನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದು, ಅದರ ಫೋಟೋಗಳು ವೈರಲ್ ಆಗುತ್ತಿದೆ.
ಕಿರುತೆರೆಯಲ್ಲಿ ಪ್ರಸಿದ್ದ ನಟಿಯರಲ್ಲಿ ರಶ್ಮಿ ಪ್ರಭಾಕರ್ ಕೂಡ ಒಬ್ಬರು. ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಸಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದವರು.
2/ 8
ಜಾಹೀರಾತು ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ನಿಖಿಲ್ ಭಾರ್ಗವ ಎಂಬುವವರ ಜೊತೆ ರಶ್ಮಿ ಪ್ರಭಾಕರ್ ಮದುವೆಯಾಗಿದ್ದು, ಇದೀಗ ಮಾಲ್ಡೀವ್ಸ್ನಲ್ಲಿ ಗಂಡನ ಜೊತೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ.
3/ 8
ಕಳೆದ ಮೂರು ವರ್ಷಗಳಿಂದ ನಿಖಿಲ್-ರಶ್ಮಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಪಡೆದು ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
4/ 8
ಸದ್ಯ ಗಂಡನ ಜೊತೆ ಮಾಲ್ಡೀವ್ಸ್ ಟ್ರಿಪ್ ಹೋಗಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಸಹ ಕಾಮೆಂಟ್ ಮಾಡಿದ್ದಾರೆ.
5/ 8
ಸೋಶಿಯಲ್ ಮೀಡಿಯಾದಲ್ಲಿ ರಶ್ಮಿ ಅವರು ಮದುವೆ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಅದಕ್ಕಾಗಿಯೇ ಕೆಲ ತಿಂಗಳುಗಳ ಹಿಂದೆ 'ಮನಸೆಲ್ಲಾ ನೀನೆ' ಧಾರಾವಾಹಿಯನ್ನು ರಶ್ಮಿ ಅರ್ಧಕ್ಕೆ ಬಿಟ್ಟಿದ್ದರು.
6/ 8
ಮಾಲ್ಡೀವ್ಸ್ನ ಸುಂದರ ಸ್ಥಳಗಳಲ್ಲಿ ರಶ್ಮಿ ಹಾಗೂ ಅವರ ಪತಿ ಪೋಸ್ ನೀಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ಗಳನ್ನು ಸಹ ಮಾಡಿದ್ದಾರೆ.
7/ 8
'ಲಕ್ಷ್ಮೀ ಬಾರಮ್ಮ', 'ಶುಭವಿವಾಹ' , 'ಜೀವನಚೈತ್ರ' , 'ಮನಸೆಲ್ಲಾ ನೀನೇ', 'ಮಹಾಭಾರತ', 'ದರ್ಪಣ', ತಮಿಳಿನ 'ಅರುಂಧತಿ', ತೆಲುಗಿನ 'ಪೌರ್ಣಮಿ', 'ಕಾವ್ಯಾಂಜಲಿ' ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ , ಸದ್ಯ ಯಾವುದೇ ಧಾರಾವಾಹಿಯನ್ನು ಸಹ ಒಪ್ಪಿಕೊಂಡಿಲ್ಲ.
8/ 8
ಆದರೆ ಮುಂದಿನ ದಿನಗಳಲ್ಲಿ ಧಾರಾವಾಹಿಗಳನ್ನು ಮಾಡುವ ಆಸೆಯನ್ನು ಹೊಂದಿದ್ದು, ನಟನೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.