Actress Koli Ramya: ಬದುಕಿನಲ್ಲಿ ಏಳು-ಬೀಳುಗಳನ್ನು ಕಂಡ ನಟಿ ಕೋಳಿ ರಮ್ಯಾ ಲೈಫ್ಸ್ಟೋರಿ ಇದು
Serial Actress: ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫ್ , ಹಲವಾರು ಜನರ ಬದುಕನ್ನು ಬದಲಾಯಿಸಿದ ಒಂದು ರಿಯಾಲಿಟಿ ಶೋ ಎನ್ನಬಹುದು. ಇದನ್ನು ನೋಡಿದವರಿಗೆ ಕೋಳಿ ರಮ್ಯಾ ಗೊತ್ತಿರುತ್ತದೆ. ಹಲವಾರು ಧಾರಾವಾಹಿಗಳಲ್ಲಿ ಸಹ ನಟಿಸಿರುವ ಇವರು ಜನಜನಿತ ಕೂಡ, ಆದರ ಇವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇವರ ಬದುಕಿನ ಕತೆ ಇಲ್ಲಿದೆ.
ಮೂಲತಃ ಭ್ರದಾವತಿಯವರಾದ ರಮ್ಯಾ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಕಷ್ಟವನ್ನು ಅನುಭವಿಸಿದವರು. ಕೇವಲ 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದು ದುಡಿಮೆ ಆರಂಭಿಸಿದವರು.
2/ 8
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಮ್ಯಾ, ಅತಿ ಕಡಿಮೆ ಸಮಯದಲ್ಲಿ ಕೋಳಿಯನ್ನು ಹಿಡಿದ ಕಾರಣ ಕೋಳಿ ರಮ್ಯಾ ಎಂದೇ ಖ್ಯಾತರಾದರು.
3/ 8
ಸೊಸೆ ತಂದ ಸೌಭಾಗ್ಯ ಧಾರಾವಾಹಿಯ ಮೂಲಕ ಧಾರಾವಾಹಿ ಲೋಕ್ಕೆ ಕಾಲಿಟ್ಟು, ನಂತರ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ದಿ ಪಡೆದಿದ್ದಾರೆ. ಕೋಳಿ ರಮ್ಯಾ ಎಂದರೆ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟ.
4/ 8
ಸಿಟಿ ಹುಡುಗಿಯರು ಹಳ್ಳಿಯಲ್ಲಿ ಬದುಕುವ ಈ ರಿಯಾಲಿಟಿ ಶೋ ನಲ್ಲಿ ರಮ್ಯಾ 2ನೇ ಸ್ಥಾನವನ್ನು ಪಡೆದಿದ್ದರು. ಅಲ್ಲಿಂದ ಅವರ ಜರ್ನಿ ಆರಂಭವಾಗಿದ್ದು. ನಂತರ ಅವರು ತಿರುಗಿ ನೋಡಿಲ್ಲ.
5/ 8
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಕಿರುತೆರೆಯಲ್ಲಿ ಸಹ ಕೋಳಿ ರಮ್ಯಾ ಹೆಸರನ್ನು ಪಡೆದಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
6/ 8
ರಮ್ಯಾ ಅವರಿಗೆ ವಿಲ್ಲನ್ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ಧಾರಾವಾಹಿ ಮಿಥುನಾ ರಾಶಿಯಲ್ಲಿ ಸಹ ವಿಲನ್ ಆಗಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಕಷ್ಟಗಳನ್ನು ಅನುಭವಿಸಿ ಮೇಲೇರಿದ್ದಾರೆ.
7/ 8
ಇನ್ನು ರಮ್ಯಾ ನಟಿ ಮಾತ್ರವಲ್ಲದೇ ನಿರೂಪಕಿ ಕೂಡ ಹೌದು, ತನನಣ ತನನಣ ಎನ್ನುವ ಕಾರ್ಯದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿ ಫೇಮಸ್ ಆಗಿದ್ದರು.
8/ 8
ಬಹಳ ಬೇಗ ಚಿತ್ರರಂಗಕ್ಕೆ ಬಂದು, ಕಷ್ಟಪಟ್ಟು ಸಾಧನೆ ಮಾಡುವುದು ಸುಲಭ ಮಾತಲ್ಲ. ಹೀಗೆ ಅವರಿಗೆ ಅವಕಾಶಗಳು ಒದಗಿ ಬರಲಿ ಎಂದು ಆಶಿಸೋಣ.