Actress Ashvini: ಸೂಪರ್ ಫೋಟೋಶೂಟ್ನಲ್ಲಿ ಮಿಂಚಿದ ಮುದ್ದುಲಕ್ಷ್ಮಿ ಅಶ್ವಿನಿ, ನಟಿಯ ಲುಕ್ ನೋಡಿ ಫ್ಯಾನ್ಸ್ ಫಿದಾ
Serial Actress: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿ ಎಲ್ಲರಿಗೂ ಬಹಳ ಇಷ್ಟ. ಅದರಲ್ಲಿ ನಾಯಕಿಯಾಗಿ ನಟಿಸಿದ್ದ ಅಶ್ವಿನಿ ಸದ್ಯ ಎಲ್ಲಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಲ್ಲದೇ ಈ ನಟಿಯ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಅವರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
ನಿರೂಪಕಿಯಾಗಿದ್ದ ಅಶ್ವಿನಿ ನಟಿಯಾಗಿ ಜನರ ಮನ ಗೆದ್ದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರೆಂದರೆ ಅಭಿಮಾನಿಗಳಿಗೆ ಬಹಳ ಇಷ್ಟ.
2/ 10
ಬಹಳಷ್ಟು ಆಫರ್ ಬಂದರೂ ಸಹ ನಿರಾಕರಿಸಿದ್ದ ನಟಿಯ ಮೊದಲ ಸೀರಿಯಲ್ ಅನುರಾಗ ಸಂಗಮ. ನಂತರ ಅವರು ಧಾರಾವಾಹಿ ಲೋಕದಲ್ಲಿ ಮಿಂಚಿದ್ದು ಎಲ್ಲರಿಗೂ ಗೊತ್ತಿದೆ.
3/ 10
ಉದಯ ಮ್ಯೂಸಿಕ್ನಲ್ಲಿ ನಿರೂಪಣೆ ಮಾಡುವ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟವರು ಈ ನಟಿ. ನಂತರ ಅವರು ನಟಿಯಾಗಿ ಜನರಿಗೆ ಇಷ್ಟವಾಗಿದ್ದಾರೆ.
4/ 10
ಮೂಲತಃ ಮೈಸೂರಿನವರಾದ ಅಶ್ವಿನಿ, ಡಿಗ್ರಿ ಮುಗಿದ ನಂತರ ಆ್ಯಂಕರ್ ಆಗಿ ಕೆಲಸಕ್ಕೆ ಸೇರಿದ್ದರು. ಉತ್ತಮ ಆ್ಯಂಕರ್ ಆಗಿ ಸಹ ಹೆಸರು ಮಾಡಿದ್ದರು.
5/ 10
ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಅವರಿಗೆ ನಟನೆಯ ಮೇಲೆ ಆಸಕ್ತಿ ಇತ್ತು. ಹಾಗಾಗಿ ಅವರಿಗೆ ನಟನೆ ಸರಾಗವಾಗಿ ಒಲಿದಿತ್ತು.
6/ 10
ಮೊದಲ ಧಾರಾವಾಹಿ ಅನುರಾಗ ಸಂಗಮದ ನಂತರ ಕುಲವಧು ಧಾರಾವಾಹಿಯಲ್ಲಿ ಸಹ ನಟಿಸಿ, ಒಂದರ ನಂತರ ಒಂದು ಅದ್ಬುತ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.
7/ 10
ಈ ಕುಲವಧು ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಬಳಿ ಸೈ ಎನಿಸಿಕೊಂಡಿದ್ದರು. ನಂತರ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದರು.
8/ 10
ಸಹನಟಿಯಾಗಿ ನಟಿಸುತ್ತಿದ್ದ ಅಶ್ವಿನಿ ಮುದ್ದುಲಕ್ಷ್ಮಿ ಧಾರಾವಾಹಿಯ ಮೂಲಕ ನಾಯಕಿಯಾದರು. ಇದೀಗ ಅಶ್ವಿನಿ ಕಿರುತೆರೆ ಲೋಕದಲ್ಲಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ.
9/ 10
ಆದರೆ ಮುದ್ದುಲಕ್ಷ್ಮಿ ಧಾರಾವಾಹಿಯ ನಂತರ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ನೀವು ಎಲ್ಲಿದೀರಾ ಎಂದು ಕೇಳುತ್ತಿದ್ದಾರೆ. ಯಾವ ಧಾರಾವಾಹಿ ಒಪ್ಪಿಕೊಂಡಿಲ್ವಾ? ಎಂದು ಪ್ರಶ್ನಿಸುತ್ತಿದ್ದಾರೆ.
10/ 10
ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇರುವ ಅಶ್ವಿನಿ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಆಗಾಗ ಅವರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.